ನ್ಯಾಮತಿ ಪಟ್ಟಣದಲ್ಲಿರುವ ಬೇಡರ ಕಣ್ಣಪ್ಪ ಸಮುದಾಯ ಭವನದಲ್ಲಿ ಇಂದು ಫೆಬ್ರುವರಿ 8 9 ರಂದು ನಡೆಯುವ 5ನೇ ಐತಿಹಾಸಿಕ ವಾಲ್ಮೀಕಿ ಜಾತ್ರೆಯು ನಡೆಯು ಅಂಗವಾಗಿ ರಾಜನಹಳ್ಳಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನಾನಂದ ಪುರಿ ಶ್ರೀಗಳ ನೇತೃತ್ವದಲ್ಲಿ ನ್ಯಾಮತಿ ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಬಿ ಸೋಮಶೇಖರಪ್ಪನವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ 5ನೇ ವಾಲ್ಮೀಕಿ ಐತಿಹಾಸಿಕ ಜಾತ್ರೆಯ ಸೇವಾ ಸಮಿತಿಯ ಅಧ್ಯಕ್ಷರಾಗಿ ಒಡೆಯರ ಹತ್ತೂರು ರಾಮಚಂದ್ರಪ್ಪ, ಪದಾಧಿಕಾರಿಗಳಾಗಿ ಕೆ ಪರಮೇಶಪ್ಪ, ರುದ್ರೇಶ್ ,ಷಣ್ಮುಖಪ್ಪ ಶಿವರಾಜ್ ,ನಾಗರಾಜಪ್ಪ ,ಇವರುಗಳನ್ನು ಶ್ರೀಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತು ಎಂದು ವಾಲ್ಮೀಕಿ ಸಮಾಜದ ಅಧ್ಯಕ್ಷ ಬಿ ಸೋಮಶೇಖರಪ್ಪ ತಿಳಿಸಿದರು.