ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯಡಿ ನೀರು ಪೂರೈಸಲಾಗುತ್ತಿದ್ದು, ದಿ:01.09.2022 ರಿಂದ ಅನ್ವಯವಾಗುವಂತೆ ಬಳಕೆ ಮಾಡಿದ ನೀರಿಗೆ ಅನುಗುಣವಾಗಿ ನೀರಿನ ದರವನ್ನು ವಿಧಿಸಲಾಗುತ್ತದೆ.
ಅದರಂತೆ ಸಲ್ಲಿಸುವ ನೀರಿನ ಕರದ ಬಿಲ್ಲನ್ನು ನಗರಸಭೆ ಆವರಣದಲ್ಲಿ ತೆರೆಯಲಾದ ಹಣ ಪಾವತಿ ಕೇಂದ್ರದಲ್ಲಿಯೇ ತುಂಬಿ ರಶೀದಿ ಪಡೆಯಬೇಕು. ಅಗತ್ಯಕ್ಕೆ ತಕ್ಕಂತೆ ನೀರನ್ನು ಬಳಸಿ ನಳದಲ್ಲಿ ನೀರು ಸೋರಿಕೆ ಕಂಡು ಬಂದಲ್ಲಿ ಗ್ರಾಹಕರ ಸೇವಾ ಕೇಂದ್ರದ ದೂ.ಸಂ: 6366962668 ನ್ನು ಸಂಪರ್ಕಿಸಬೇಕೆಂದು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.