ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ ಅಭಿವೃದ್ಧಿಗೆ ಮೂರರಿಂದ ನಾಲ್ಕು ಸಾವಿರ ಕೋಟಿ ಅನುದಾನ ತರಲಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಹೇಳಿದರು.
ಹೊನ್ನಾಳಿ ತಾಲೂಕು ಹುಣಸಘಟ್ಟ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗ್ರವಾಗಿ ಆಯೋಜಿಸಲಾದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಲೂಕಿಗೆ ೩,೫೦೦ ಮನೆಗಳು ಮಂಜೂರು ಮಾಡಿಸಿ, ರೂ.೧೩೧ ಕೋಟಿ ಅನುದಾನ ತರಲಾಗಿದೆ ಎಂದರು.
ಹುಣಸಘಟ್ಟ ಗ್ರಾಮದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ, ರಸ್ತೆ ನಿರ್ಮಾಣ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ ಎಂದರು. ನನ್ನ ಅಭಿವೃದ್ಧಿ ಕೆಲಸಕ್ಕೆ ಕೆಲವರು ಟೀಕೆ ಮಾಡುತ್ತಾರೆ, ಟೀಕೆಗೆ ಅಂಜುವುದಿಲ್ಲ, ಜಗ್ಗುವುದಿಲ್ಲ. ಸೇವಕನಂತೆ ಸದಾ ನಿಮ್ಮ ಕೆಲಸಮಾಡುತ್ತೇನೆ ಎಂದರು.
ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಮಾತನಾಡಿ, ಗ್ರಾಮ ವಾಸ್ತವ್ಯ ವಿನೂತನ ಕಾರ್ಯಕ್ರಮವಾಗಿದೆ. ಸರ್ಕಾರದ ಆಡಳಿತ ಯಂತ್ರ ಜನರ ಮನೆ ಬಾಗಿಲಿಗೆ ಬಂದು, ನಿಮ್ಮ ಕುಂದುಕೊರತೆಗಳನ್ನು ಆಲಿಸುವುದರೊಂದಿಗೆ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿದೆ. ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ನೀಡುವುದರ ಜೊತೆಗೆ ಆ ಯೋಜನೆಗ ಲಾಭ ಹೇಗೆ ಪಡೆದುಕೊಳ್ಳಬೇಕು ಎಂಬುದುರ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
೧೯೬ ಫಲಾನುಭವಿಗಳಿಗೆ ಸೌಲಭ್ಯ: ೨೧ ಜನರಿಗೆ ವೃದ್ಧಾಪ್ಯವೇತನ, ೧೪ ಜನರಿಗೆ ಸಂದ್ಯಾಸುರಕ್ಷಾ, ೦೪ ಜನ ಅಂಗವಿಕಲರಿಗೆ, ಓರ್ವರಿಗೆ ವಿಧವಾ ವೇತನ, ೦೩ ಜನ ಮನಸ್ವಿನಿ, ೩೯ ಜನರಿಗೆ ೯೪ ಸಿ ರಡಿ ಹಕ್ಕುಪತ್ರ, ೩೫ ಜನರಿಗೆ ಆಧಾರ್ ತಿದ್ದುಪಡಿ, ೦೩ ಜನರಿಗೆ ಪೌತಿಖಾತೆ ಪತ್ರಗಳನ್ನು ನೀಡಲಾಗಿತು.
ನರೇಗಾ ಯೋಜನೆಯಡಿ ೨೦ ಜನರಿಗೆ ಕೊಟ್ಟಿಗೆ ನಿರ್ಮಾಣ, ೪೬ ಜನರಿಗೆ ಬಚ್ಚಲಗುಂಡಿ ನಿರ್ಮಾಣ ಹಾಗೂ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ೧೯ ಜನರಿಗೆ ಆದೇಶ ಪತ್ರ ವಿತರಣೆ ಮಾಡಲಾಯಿತು.
ಗ್ರಾಮ ವಾಸ್ತವ್ಯದಲ್ಲಿ ವಿವಿಧ ಇಲಾಖೆಯ ಮಾಹಿತಿಯನ್ನು ಅಧಿಕಾರಿಗಳು ವಿವರಿಸಿದರು. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು.
ಸೀಮಂತ: ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಸ್ತಿçà ಶಕ್ತಿ ಸಂಘದ ಮಹಿಳೆಯರು ಗ್ರಾಮ ವಾಸ್ತವ್ಯದ ಅತಿಥಿಗಳಿಗೆ ಪೂರ್ಣಕುಂಭ ಸ್ವಾಗತ ಕೋರಿದರು.
ಹೊನ್ನಾಳಿ ಉಪವಿಭಾಗಾಧಿಕಾರಿ ಹುಲ್ಮನಿ ತಿಮ್ಮಣ್ಣ, ತಹಶೀಲ್ದಾರ ರೇಣುಕಾ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಮು ಭೊವಿ, ತಾ.ಪಂ.ಆಡಳಿತಾಧಿಕಾರಿ ಹಾಗೂ ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ ಚಿಟ್ಟಾಲ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಇತರರು ಭಾಗವಹಿಸಿದರು.

Leave a Reply

Your email address will not be published. Required fields are marked *