ಹುಣಸಘಟ್ಟ : ಐತಿಹಾಸಿಕ ಹಿನ್ನೆಲೆ ಹೊಂದಿರುವ ಗುಡ್ಡದ ಬೈರನಹಳ್ಳಿ ಶ್ರೀ ಬಸವೇಶ್ವರ ಸ್ವಾಮಿ ಕದಳಿ ಉತ್ಸವ ಹಾಗೂ ಕಾರ್ತಿಕೋತ್ಸವ ಭಾನುವಾರ ರಾತ್ರಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.

 ಅಂದು ಮುಂಜಾನೆ ಗ್ರಾಮದ ಉದ್ಭವ ಹಾಗೂ ಉತ್ಸವ ಮೂರ್ತಿಗಳಾದ ಆಂಜನೇಯ ಬಸವೇಶ್ವರ ಸ್ವಾಮಿಗೆ ಕ್ಷೀರ ಅಭಿಷೇಕ  ವಿಶಿಷ್ಟ ಬಿಲ್ವಾರ್ಜನೆ ವಿಶೇಷ ಪೂಜಾ ಕೈಂಕಾರ್ಯ ನೆರವೇರಿಸಲಾಯಿತು. ನಂತರ ಗ್ರಾಮದ ಮುಖಂಡರು ಮಡಿಯಿಂದ ಬಾಳೆಯ ತೋಟದಲ್ಲಿ ದೇವರು ತೋರಿಸಿದ ಬಾಳೆ ಮರಗಳನ್ನು ಪೂಜಿಸಿ ಕಡಿದು ಗ್ರಾಮಕ್ಕೆ ಮೆರವಣಿಗೆ ಮೂಲಕ ತರಲಾಯಿತು.

 ಕಂಬದಿಂದ ಬಾಳೆ ಪಟ್ಟೆಗಳನ್ನು ಬೇರ್ಪಡಿಸಿ ನಾನಾ ಬಗೆಯ ವಿನ್ಯಾಸದ ಆಕಾರದಲ್ಲಿ ಕತ್ತರಿಸಿ ಭವ್ಯ ತಿರುಗಣಿ ಮಂಟಪವನ್ನು ವೀಳ್ಯದೆಲೆ ಹೊಂಬಾಳೆ ಸುಗಂಧ ಜಾಜಿ ಸೇವಂತಿಗೆ ಕನಕಾಂಬರ  ಹೂವಿನ ಹಾರಗಳಿಂದ  ಸಿಂಗಾರ ಗೊಳಿಸಲಾಯಿತು.

 ರಾತ್ರಿ ಗ್ರಾಮದ ಮುತ್ತೈದೆಯರು ಪಂಚ ಕಳಸದಾರತಿಗಳನ್ನು ಹಿಡಿದು ಗ್ರಾಮದ ಹೊರವಲಯದಲ್ಲಿ ಗಂಗಾಜಲ ಪೂಜಿಸಿದ ಕೇಲನ್ನು ಜಾನಪದ ಕಲಾ ಮೇಳಗಳ ವಾದ್ಯದ ಮೂಲಕ ರಾಜಭೀದಿಯುವುದಕ್ಕೂ ಯುವಕರು ದೊಡ್ಡ ದೊಡ್ಡ ಧಮಾಕ ಬಾಣ ಬಿರುಸುಗಳನ್ನು ಆಕಾಶದಿದ್ದರಕ್ಕೆ ಸಿಡಿಸಿ   ಮೆರವಣಿಗೆ ಮೂಲಕ ಬಸವೇಶ್ವರ ಸ್ವಾಮಿಯನ್ನು ಸಿಂಗಾರಗೊಂಡ ತಿರುಗುಣಿ ಕದಳಿ ಮಂಟಪದಲ್ಲಿ ಪ್ರತಿಷ್ಠಾಪಿಸಿ. ಗ್ರಾಮದ ಯುವತಿಯರು ಹಾಗೂ ತವರೂರಿಗೆ ಆಗಮಿಸಿದ ಹೆಣ್ಣು ಮಕ್ಕಳು ದೇವಾಲಯದ ಸುತ್ತ ಸಾಲು ಸಾಲು ದೀಪಗಳನ್ನು ಹಚ್ಚಿ ಸಂಭ್ರಮಿಸಿದರು. ನಂತರ  ಗ್ರಾಮದ ಹಿರಿಯರು ಸ್ವಾಮಿಯ ಕದಳಿ ಮಂಟಪ ತಿರುಗಿಸುವುದರ ಮೂಲಕ ಚಾಲನೆ ನೀಡಿದರು.

 ತಿರುಗಣಿ ಅಪ್ಪಣೆ : ವರ್ಷಕ್ಕೊಮ್ಮೆ ಗ್ರಾಮದ ಹಿರಿಯರು ಮುಂದಿನ ಮಳೆ ಬೆಳೆ ಗ್ರಾಮದ ಸುಭಿಕ್ಷೆ ಬಗ್ಗೆ ತಿರುಗಿ ಅಪ್ಪಣೆ ಕೇಳಿದ ಬಳಿಕ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಸಾಲುಸರಧಿಯಲ್ಲಿ ನಿಂತು ದೇವರ ದರ್ಶನ ಪಡೆದು ಮಕ್ಕಳ ಓದು ನೌಕರಿ ಮದುವೆ ಮನೆ ಕಟ್ಟುವುದು ಜಮೀನು ಖರೀದಿ ಸೇರಿದಂತೆ ಕಷ್ಟ ಕಾರ್ಪಣ್ಯಗಳ ಬಗ್ಗೆ ತಿರುಗಣಿ ಅಪ್ಪಣೆ ಕೇಳಿ ಭಕ್ತಿ ಸಮರ್ಪಿಸಿ ಗ್ರಾಮೀಣ ಜಾನಪದ ಸಗಡಿನ ತಿರುಗಣಿ ಕದಳಿ ಉತ್ಸವದ ಸೊಬಗನ್ನು ಭಕ್ತರು ಕಣ್ಣು ತುಂಬಿಕೊಂಡರು. ಕಾರ್ಯಕ್ರಮದ ಕೊನೆಯಲ್ಲಿ ವೀರಗಾಸೆ ಮಹಿಳಾ ತಂಡದವರು ಮಂಡಲ ಪೂಜೆ ನೆರವೇರಿಸಿದರು.

Leave a Reply

Your email address will not be published. Required fields are marked *