ಸಾಸ್ವಹಳ್ಳಿ: ಸಮೀಪದ ಹನುಮನಹಳ್ಳಿ ಮತ್ತು ಮಾವಿನಕೋಟೆ ಜಂಟಿಯಾಗಿ ಸಿಸಿ ರಸ್ತೆ ನಿರ್ಮಾಣ ಕಾರ್ಯವನ್ನು ಶಾಸಕರ ಅನುದಾನದಲ್ಲಿ 450 ಮೀಟರ್ ಉದ್ದದ 4.5 ಮೀಟರ್ ಅಗಲದ ರಸ್ತೆ ನಿರ್ಮಾಣ ಕಾರ್ಯವು ನಡೆದಿದೆ. ಆದರೆ ಮಾವಿನ ಕೋಟೆ ಮುಖ್ಯ ರಸ್ತೆ ಅಳತೆಯಲ್ಲಿ ಕಾಮಗಾರಿ ಸರಿಯಾಗಿದೆ. ಮಾವಿನಕೋಟೆಯ ಒಂದು ಬೀದಿಯು 40 ಅಡಿ ಅಗಲ ರಸ್ತೆ ನಿರ್ಮಾಣ ಮಾಡಿದ್ದಾರೆ. ಆದಿಷ್ಟು ಭಾಗವನ್ನು ರಸ್ತೆಯೇ ಎಂಬ ಪ್ರಶ್ನೆ ಮೂಡಿದೆ ಎಂದು ಶ್ರೀಧರ್ ತಿಳಿಸಿದ್ದಾರೆ.
ಪತ್ರಿಕಾ ಘೋಷ್ಠಿಯಲ್ಲಿ ಅವರು ಮಾತನಾಡಿದರು.
ನಾವು ದಿನನಿತ್ಯ ಆ ರಸ್ತೆಯಲ್ಲಿ ಚಾನೆಲ್ ಕೆಲಸಕ್ಕೆ, ಹೊಲಗಳಿಗೆ ಓಡಾಡುತ್ತೇವೆ. ನಾವು ಈ ರಸ್ತೆಯಲ್ಲಿ ಓಡಾಡುವಾಗ ಮನೆಯವರು ತಕರಾರು ಮಾಡುತ್ತಾರೆ. ಸಾರ್ವಜನಿಕವಲ್ಲದ ಜಾಗದಲ್ಲಿ ಹೇಗೆ ರಸ್ತೆ ನಿರ್ಮಾಣ ಮಾಡಿದರು ಎಂಬ ಪ್ರಶ್ನೆ ಮೂಡುತ್ತದೆ. ಗ್ರಾಮ ಪಂಚಾಯಿತಿಯವರು ಈ ರಸ್ತೆಯನ್ನು ಪರಿಶೀಲಿಸಿ ಸರ್ಕಾರನ ಅನುದಾನದಲ್ಲಿ ನಿರ್ಮಾಣವಾಗಿರುವ ಈ ಸಿಸಿ ರಸ್ತೆಯನ್ನು ಎಷ್ಟು ಅಗಲವಿದೆಯೋ ಅಷ್ಟು ಅಗಲವನ್ನು ರಸ್ತೆಯಾಗಿ ದಾಖಲಿಸಿಕೊಳ್ಳಬೇಕು. ಇಲ್ಲವಾದರೆ ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ್ ರಾವ್, ಬಸವಂತ ರಾವ್, ಹಾಲೇಶ್ ಇದ್ದರು.