ನ್ಯಾಮತಿ: ಪಟ್ಟಣದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ ಪ್ರೌಢಶಾಲಾ ವಿಭಾಗ ಹಾಗೂ ನ್ಯಾಮತಿ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಸ್ಟೂಡೆಂಟ್ ಪೊಲೀಸ್ ಕೇಡಟ್ ಯೋಜನೆಯ ವತಿಯಿಂದ ಹೊನ್ನಾಳಿ ಅಗ್ನಿಶಾಮಕ ದಳ ಠಾಣೆಯ ಸಿಬ್ಬಂದಿಯಿAದ ಬೆಂಕಿ ನಂದಿಸುವ ಅಣುಕು ಪ್ರದರ್ಶನ ಮಾಡಲಾಯಿತು.
ಹೊನ್ನಾಳಿ ಅಗ್ನಿ ಶಾಮಕ ಠಾಣಾಧಿಕಾರಿ ಪರಶುರಾಮಪ್ಪ ನಂತರ ಮಾತನಾಡಿ ಸ್ಟುಡೆಂಟ್ ಪೊಲೀಸ್ ಕೆಡೆಟ್ ವಿದ್ಯಾರ್ಥಿಗಳಿಗೆ ಬೆಂಕಿ ನಂದಿಸುವ ಹಾಗೂ ಅಪಘಾತ ಅವಘಡ ವಿಪತ್ತು ನಿರ್ವಹಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಈ ಶಾಲೆಯ ಸುಮಾರು ೪೦೦ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ವೀಕ್ಷಿಸಿದರು. ನ್ಯಾಮತಿ ಗೃಹರಕ್ಷಕ ದಳದ ರಾಘವೇಂದ್ರ ಮೊಳೆಕರ್ ವಿದ್ಯಾರ್ಥಿಗಳಿಗೆ ರಜಾ ದಿನಗಳಲ್ಲಿ ನೀರಿನಲ್ಲಿ ಸುರಕ್ಷಿತವಾಗಿ ಈಜಾಡುವುದರ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರಾದ ಸಿದ್ದೇಶಪ್ಪ ಜಿ, ನೋಡಲ್ ಶಿಕ್ಷಕ ಬಸವನಗೌಡ ಬಿಜಿ, ಪೊಲೀಸ್ ಚಂದ್ರಶೇಖರ್ ಹೋಂ ಗಾರ್ಡ್ ರಾಘವೇಂದ್ರ ಮೊಳೇಕರ್. ಶಾಲಾ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಸಹ ಉಪಸ್ಥಿತರಿದ್ದರು.