ಹೊನ್ನಾಳಿ ಡಿ 21 ಪಟ್ಟಣದಲ್ಲಿರುವ ಪುರಸಭೆ ವ್ಯಾಪ್ತಿಯಲ್ಲಿ ಬರುವ ಪುರಸಭೆ ಕಚೇರಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಂಡು 19 ಜನ ಸಪಾಯಿ ಕರ್ಮಚಾರಿಗಳಿಗೆ ನಿಯಮಾನಸಾರ ಗುರುತಿನ ಚೀಟಿಯನ್ನು ಪುರಸಭೆಯ ಅಧ್ಯಕ್ಷ ಟಿಎಚ್ ರಂಗನಾಥ್ ಮತ್ತು ಪುರಸಭೆ ಮುಖ್ಯ ಅಧಿಕಾರಿ ಎಸ್ಆರ್ ವೀರಭದ್ರಯ್ಯನವರು ವಿತರಿಸಿದರು.
ಸಪಾಯಿ ಕರ್ಮಚಾರಿಗಳಿಗೆ ಗುರುತಿನ ಚೀಟಿ ವಿತರಿಸಿ ಮುಖ್ಯ ಅಧಿಕಾರಿ ಎಸ್ಆರ್ ವೀರಭದ್ರಯ್ಯ ಮಾತನಾಡಿ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಪಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವತಿಯಿಂದ ಇವರಿಗೆ ಗೃಹ ನಿರ್ಮಾಣ ,ಐರಾವತ ಸಾಲ, ಕ್ಲೀನಿಂಗ್ ಮಿಷನ್, ಲ್ಯಾಪ್ಟಾಪ್ ಮತ್ತು ಅವರ ಮಕ್ಕಳಿಗೆ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಿಕ್ಷಣಕ್ಕೆ ಇನ್ನೂ ಹಲವಾರು ಯೋಜನೆಗಳನ್ನ 90% ಉಚಿತವಾಗಿ ಸಾಲ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರಾಜೇಂದ್ರ ,ತನ್ವೀರ್ ಅಹ್ಮದ್ ,ಕಂದಾಯ ಅಧಿಕಾರಿ ವಸಂತ್ ,ಆರೋಗ್ಯ ನಿರೀಕ್ಷಕರಾದ ಹರ್ಷವರ್ಧನ್, ಶ್ರೀಮತಿ ನಿರಂಜನ್ ಹಾಗೂ ಪುರಸಭೆ ಸಿಬ್ಬಂದಿ ವರ್ಗದವರು ಮತ್ತು ಸಪಾಯಿ ಕರ್ಮಚಾರಿಗಳು ಸಹ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *