ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕರ‍್ಯರ‍್ಶಿ ಹಾಗೂ ಹೊನ್ನಾಳಿ ಶಾಸಕರಾದ ಎಂ.ಪಿ.ರೇಣುಕಾಚರ‍್ಯ ಅವರು ಡಿಸೆಂಬರ್ ೨೪ ಹಾಗೂ ೨೫ ರಂದು ಕ್ಷೇತ್ರ ಪ್ರವಾಸ ಕೈಗೊಳ್ಳಲಿದ್ದಾರೆ.
ಡಿ.೨೪ ರಂದು ಬೆ.೧೦.೪೫ ಹೊನ್ನಾಳಿಯಿಂದ ಹೊರಟು ೧೧ ಗಂಟೆಗೆ ಅರಕೆರೆ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸುವರು. ಮ.೧೨ ಗಂಟೆಗೆ ಬಸವನಹಳ್ಳಿ ಗ್ರಾಮದಲ್ಲಿಗ್ರಾಮ ವಾಸ್ತವ್ಯಕರ‍್ಯಕ್ರಮದಲ್ಲಿ ಭಾಗವಹಿಸುವರು. ಮ.೨.೩೦ಕ್ಕೆ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ/ಉದ್ಘಾಟನೆ ನೆರವೇರಿಸುವರು. ನಂತರ ಹೊನ್ನಾಳಿಗೆ ಪ್ರಯಾಣ ಮತ್ತು ವಾಸ್ತವ್ಯ.ಮಾಡುವರು.
ಡಿ.೨೫ ರಂದು ಬೆ.೧೧ ಗಂಟೆಗೆ ನ್ಯಾಮತಿತಾಲ್ಲೂಕಿನಸವಳಂಗ ಗ್ರಾಮದಲ್ಲಿ ನೀರು ಬಳಕೆದಾರರ ಸಂಘ, ಸವಳಂಗ ಮತ್ತುರೈತರೊಂದಿಗೆ ಸಭೆ ನಡೆಸುವರು. ಮ.೧೨.೩೦ಕ್ಕೆ ಹೆಚ್.ಗೋಪಗೊಂಡನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆಯುವ ವಿ.ಎಸ್.ಎಸ್..ಎನ್. ಅಧ್ಯಕ್ಷರಆಯ್ಕೆ ಸಭೆಯಲ್ಲಿ ಭಾಗವಹಿಸುವರು. ಮ.೦೩ ಗಂಟೆಗೆ ರಸ್ತೆ ಮೂಲಕ ಬೆಳಗಾವಿಗೆ ಪ್ರಯಾಣ ಬೆಳೆಸುವರೆಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *