ನ್ಯಾಮತಿ : ಸೂರಗೊಂಡನ ಕೊಪ್ಪ ಗ್ರಾಮದ ಶ್ರೀ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಿ ದೇವಸ್ಥಾನ ಆವರಣದಲ್ಲಿಂದು ೨೦೨೨- ೨೩ನೇ ಸಾಲಿನ ಎಸ್ ಸಿ ಎಸ್ ಪಿ/ ಟಿಎಸ್‌ಪಿ ಯೋಜನೆ ಅಡಿಯಲ್ಲಿ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ,ಈ ಕಾರ್ಯಕ್ರಮದ ಉದ್ಘಾಟನೆ ಅಲೋವೆರಾ ಗಿಡಕ್ಕೆ ನೀರುಣುಸುವುದರ ಮೂಲಕ ಚಿನ್ನಿಕಟ್ಟಿ ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಕವಿತಾ ಬಾಯಿ ನೆರವೇರಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ ಶಂಕರ್ ಗೌಡ ಮಾತನಾಡಿ ಆಯುಷ್ ಪದ್ಧತಿಯನ್ನು ಜನರು ಅಳವಡಿಸಿಕೊಂಡು ಅಡ್ಡ ಪರಿಣಾಮಗಳಿಲ್ಲದೆ ಆಯುಷ್ ಔಷಧ ಉಪಯೋಗಿಸಿ ಆರೋಗ್ಯವನ್ನು ಪಡೆಯಬಹುದು ಎಂದು ತಿಳಿಸಿ ಸೇವಾಲಾಲ್ ಪಾದಯಾತ್ರೆಗಳಿಗೆ ಆಯುಷ್ ಇಲಾಖೆಯ ವತಿಯಿಂದ ಉಚಿತವಾಗಿ ಪಾದಗಳ ಆರೈಕೆಗೆ ಬಿಳಿ ಮುಲಾಂ ವಿತರಿಸಲಾಗುವುದು ಎಂದು ತಿಳಿಸಿದರು. ೨೫೦ಕ್ಕೂ ಹೆಚ್ಚು ಜನರು ಆಯುಷ್ ವೈದ್ಯರಿಂದ ಚಿಕಿತ್ಸೆಯನ್ನು ಪಡೆದರು.
ಈ ಸಂದರ್ಭದಲ್ಲಿ: ವೈದ್ಯಾಧಿಕಾರಿಗಳಾದ ಡಾ ಲಿಂಗರಾಜೇAದ್ರ, ಡಾ ಶಿಲ್ಪ, ಡಾ ಚಂದ್ರಶೇಖರಯ್ಯ ಸಾಲಿಮಠ, ಡಾ. ರವಿ ಗಂಗೂರ್, ಡಾ ರಾಜೇಶ್, ಡಾ. ಪ್ರಭಾಕರ್, ಡಾ.ರೇವ್ಯಾನಾಯ್ಕ, ಡಾ. ಸಿದ್ದೇಶ್, ಮುಖ್ಯ ಇಂಜಿನಿಯರ್ ಹನುಮಂತಪ್ಪ, ಆಶಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗದವರು ಸಹ ಉಪಸ್ಥಿತರಿದ್ದರು.