ನ್ಯಾಮತಿ: ಪಟ್ಟಣದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ದೇಶ ಕಂಡAತಹ ಶ್ರೇಷ್ಠ ಗಣಿತಜ್ಙ ಶ್ರೀನಿವಾಸ ರಾಮಾನುಜನ್ ಇವರ ಜನ್ಮದಿನೋತ್ಸವ ಕಾರ್ಯಕ್ರಮ ಆಚರಿಸಲಾಯಿತು . ಇದರ ಅಂಗವಾಗಿ ಗಣಿತ ವಿಷಯದ ಮಾದರಿಗಳ ವಸ್ತು ಪ್ರದರ್ಶನ, ಚಿತ್ರಕಲಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಪ್ರಾಚಾರ್ಯ ವಿ.ಪಿ ಪೂರ್ಣಾನಂದರವರು ಗಣಿತದ ಮಾದರಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿವಿದ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲಾ ವಿಭಾಗದ ಹಿರಿಯ ಸಹ ಶಿಕ್ಷಕರಾದ ಶ್ರೀ ಸಿದ್ದೇಶ್ವರ ಜಿಗಣಪ್ಪ ಮಾತನಾಡಿ ವಿದ್ಯಾರ್ಥಿಗಳ ಗಣಿತದ ಮಾದರಿ ತಯಾರಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತೀರ್ಪುಗಾರರಾಗಿ ಆಗಮಿಸಿದ್ದ ನ್ಯಾಮತಿ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಗಣಿತ ಉಪನ್ಯಾಸಕರಾದ ಶ್ರೀ ಗಂಗಾಧರ್ ನವಲೆ ವಿಶ್ವ ಕಂಡAತಹ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಜೀವನ ಮತ್ತು ಸಾಧನೆಗಳನ್ನು ಕುರಿತು ಮಾತನಾಡಿದರು .ಮತ್ತೋರ್ವ ತೀರ್ಪುಗಾರರಾಗಿ ಆಗಮಿಸಿದ್ದ ಅರಗಬಟ್ಟೆ ಪ್ರೌಢಶಾಲೆಯ ಸಹ ಶಿಕ್ಷಕರಾದ ಶ್ರೀ ಪ್ರೇಮ್ ಕುಮಾರ್ ಸಹ ಮಾತನಾಡಿದರು. ಸುಪ್ರಿಯಾ ಪ್ರಾರ್ಥನೆ ಮಾಡಿದರು ಸಹ ಶಿಕ್ಷಕಿ ವಿಣಾಶ್ರೀ ಸ್ವಾಗತಿಸಿದರು .ಸಹ ಶಿಕ್ಷಕ ವಿನಾಯಕ ವಂದಿಸಿದರು. ವಿದ್ಯಾರ್ಥಿನಿ ಚಂದನ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ Sಆಒಅ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಎಲ್ಲಾ ಶಿಕ್ಷಕರು ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು .