ಹೊನ್ನಾಳಿ :ಡಿ ೨೭ ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಶ್ರೀ ಭರತ್ ಹೆಚ್‌ಸಿ ೧೬೯ ಹಾಗೂ ಲಂಚದ ಹಣವನ್ನು ಪಡೆಯಲಿಕ್ಕೆ ಸಹಕರಿಸಿದ ಇವರ ಅಕ್ಕನ ಗಂಡನಾದ ಸುರೇಶ್ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ದಾಳಿಗೆ ಹೆಡ್ ಕಾನ್ಸ್ಟೇಬಲ್ ಶ್ರೀ ಭರತ್ ಬಲಿಯಾಗಿದ್ದಾರೆ .
ಹೆಡ್ ಕಾನ್ಸ್ಟೇಬಲ್ ಭರತ್ ರವರು ಹಾವೇರಿ ಜಿಲ್ಲೆ ರಟ್ಟಳ್ಳಿ ತಾಲೂಕಿನ ಗುಡ್ಡದ ಮಾದಾಪುರದ ಅವಿನಾಶ್ ಕೊಟ್ಟ ದೂರಿನ ಅನ್ವಯ ತಮಿಳುನಾಡಿ ರಾಜ್ಯದ ಆರೋಪಿತರ ವಿರುದ್ಧ ಬಂದ ವಾರೆಂಟ್ ಜಾರಿ ಮಾಡಲು ರೂ.೨೦,೦೦೦ ಗಳಿಗೆ ಬೇಡಿಕೆ ಇಟ್ಟಿದ್ದು ಅದರ ಪ್ರತಿ ಡಿ ೨೭ ಸಂಜೆ ೬:೪೫ ಸಮಯಕ್ಕೆ ಸರಿಯಾಗಿ ಇವರ ಅಕ್ಕನ ಗಂಡನಾದ ಸುರೇಶ್ ಮೂಲಕ ರೂ ೧೫,೦೦೦ ಹಣವನ್ನು ಪಟ್ಟಣದ ಬಸ್ ನಿಲ್ದಾಣ ಹತ್ತಿರ ಲಂಚ ಪಡೆಯುವಾಗ ದಾವಣಗೆರೆ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಾದ ಶ್ರೀ ರಾಮಕೃಷ್ಣ ಕೆ ಜಿ ,ಡಿ ಓ ಎಸ್ ಪಿ ಶ್ರೀರಾಷ್ಟ್ರಪತಿ ಎಚ್ ಎಸ್ ಇವರುಗಳ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದರು.