ನ್ಯಾಮತಿ: ತಾಲೂಕಿನ ಮುಸೇನಾಳ ಗ್ರಾಮದಲ್ಲಿ ಇತ್ತೀಚಿಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಸುಮಾರು ೫೫ ಎಕ್ಕರ್ ಜಮೀನಿನಲ್ಲಿ ಕೆಲವೊಂದು ಜಮೀನಿನಲ್ಲಿ ಕಟಾವು ಮಾಡಿದ ಮೆಕ್ಕೆಜೋಳ ರಾಶಿ ಸುಟ್ಟುಹೋಗಿದೆ ಮತ್ತು ಕೆಲವೊಂದು ಕಟಾವು ಮಾಡದೇ ಇರುವ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ , ಒಟ್ಟಾಗಿ ಸೇರಿ ೫೫ ಎಕ್ಕರೆ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಸುಟ್ಟು ಕರಕಲಾಗಿದೆ ಎಂದು ಕಂದಾಯ ಅಧಿಕಾರಿ ತಿಳಿಸಿದರು ಮುಸೇನಾಳ ಗ್ರಾಮದಲ್ಲಿ ಮೆಕ್ಕೆಜೋಳ ಸುಟ್ಟು ಕರಕಲಾದ ಜಮೀನಿಗೆ ಭೇಟಿ ನೀಡಿ ಹೊನ್ನಾಳಿ ಉಪವಿಭಾಗದ ಅಧಿಕಾರಿ ಹುಲ್ಲುಮನಿ ತಿಮ್ಮಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿ ೫೫ ಎಕ್ಕರೆ ಜಮೀನಿನಲ್ಲಿ ಬೆಳೆದಿರುವ ಮೆಕ್ಕೆಜೋಳ ಸೇರಿ ದಂತೆ ೧೦ ರಿಂದ ೧೫ ಎಕ್ಕರೆ ಅರಣ್ಯ ಪ್ರದೇಶವು ಸಹ ಸುಟ್ಟಿರುವುದಾಗಿ ತಿಳಿಸಿದ್ದಾರೆ. ಮೆಕ್ಕೆಜೋಳ ಸುಟ್ಟ ಜಮೀನಿಗೆ ಸರ್ಕಾರದಿಂದ ಪರಿಹಾರವು ಸಹ ದೊರೆಯಲಿದೆ ಎಂದು ಹೇಳಿದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಿವರಾಮ ನಾಯ್ಕ್ ಮಾತನಾಡಿ ಬೀಜ ಗೊಬ್ಬರ ಔಷಧಿ ಸೇರಿದಂತೆ ಪ್ರತಿ ಎಕರೆಗೆ ಸುಮಾರು ೨೦ರಿಂದ ೨೫ ಸಾವಿರ ಹಣ ಖರ್ಚು ಮಾಡಿದ್ದಾರೆ ಮೊದಲೇ ಮಳೆಯಿಂದ ಅತಿವೃಷ್ಟಿಯಿಂದ ನಷ್ಟ ಸಂಭವಿಸಿದ್ದು ಇದರ ಜೊತೆಗೆ ರೈತರಿಗೆ ಆಕಸ್ಮಿಕ ಬೆಂಕಿ ಅವಗಡ ಆಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ತಿಳಿಸಿದರು. ಈ ವೇಳೆ ರೈತರಾದ ಪ್ರಕಾಶ್ ನಾಯ್ಕ, ಶಿವಾಜಿ ನಾಯ್ಕ, ಮಂಜ ನಾಯ್ಕ, ಸವಳಂಗ ಕೃಷಿ ಅಧಿಕಾರಿ ಮಂಜುನಾಥ್, ಆರ್ ಐ ಸುಧೀರ್, ವಿಎ ಮಂಜುನಾಥ್ ,ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.