ದನಗಳ ನೆಲಹಾಸುಗಳ ಸೌಲಭ್ಯಕ್ಕೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
  ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡಿರುವ  ಪ.ಜಾತಿ/ಪ.ಪಂಗಡದ ಫಲಾಭವಿಗಳನ್ನು ವಿಧಾನಸಭಾಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಗುವುದು. ಮಹಿಳೆಯರಿಗೆ ಶೇ.33.3 ಹಾಗೂ ವಿಶೇಷ ಚೇತನರಿಗೆ ಶೇ.3 ರಷ್ಟು ಆದ್ಯತೆ ನೀಡಲಾಗುವುದು.
  ಆಸಕ್ತರು ಸಮೀಪದ ಪಶು ವೈದ್ಯಕೀಯ ಸಂಸ್ಥೆಗಳಿಂದ ಅರ್ಜಿ  ನಮೂನೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿಮಾಡಿದ ಅರ್ಜಿಯನ್ನು ದಿ:07.01.2023 ರೊಳಗಾಗಿ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
===

Leave a Reply

Your email address will not be published. Required fields are marked *