ನ್ಯಾಮತಿ :ಪಲವನಹಳ್ಳಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷ ಮತ್ತು ಉಪಧ್ಯಕ್ಷರ ಗಾದೆಗೆ ಚುನಾವಣೆ ನಡೆಯಿತು. ಅಧ್ಯಕ್ಷರ ಗಾದೆಗೆ ತೀವ್ರ ಪೈಪೋಟಿ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಶಕುಂತಲಾ ಬಾಯಿ ನಾಮಪತ್ರ ಅರ್ಜಿ ಸಲ್ಲಿಸಿದ್ದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಜಯಶ್ರೀ ಸಹ ನಾಮಪತ್ರ ಅರ್ಜಿ ಸಲ್ಲಿಸಿದ್ದರು. ಈ ಎರಡು ಅಧ್ಯಕ್ಷ ಅಭ್ಯರ್ಥಿಗಳು ಒಬ್ಬರು ಕೂಡ ನಾಮಪತ್ರ ಅರ್ಜಿ ವಾಪಾಸ್ ತೆಗೆದುಕೊಳ್ಳದೆ ಕಾರಣ ಚುನಾವಣೆ ಮತದಾನದ ಮೂಲಕ ನಡೆಸಲಾಯಿತು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಕುಂತಲಾ ಬಾವಿ ೩ ಮತ ಪಡೆದರು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯಶ್ರೀ ಭೈರಪ್ಪ ೭ ಮತ ಪಡೆದು ಜಯಶೀಲರಾಗಿ ಅಧ್ಯಕ್ಷರ ಗಾದೆಗೆ ಆಯ್ಕೆ ಯಾದರು ಎಂದು ಚುನಾವಣಾ ಅಧಿಕಾರಿ ಕಣವೇಶ ಹನುಮಪ್ಪ ತಿಳಿಸಿದರು. ಉಪಾಧ್ಯಕ್ಷರಗಾದೆಗೆ ಮುಸೇನಾಳ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ್ ನಾಯ್ಕ್ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣೆ ಅಧಿಕಾರಿ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿ ಕಣಿವೆ ಹನುಮಪ್ಪ, ಸದಸ್ಯರುಗಳಾದ ಜಿತೇಂದ,್ರ ನೇತ್ರಮ್ಮ, ಗೋವಿಂದರಾಜ್, ನಾಗೇಶ್ ನಾಯಕ್, ಪ್ರವೀಣ್, ಪಿಆರ್ ನಟರಾಜಪ್ಪ, ಶಕುಂತಲಾ ಬಾಯಿ, ಪ್ರೀತಿ ಎಂ ಕೆ, ಮಾಜಿ ಅಧ್ಯಕ್ಷರಾದ ಅನಿತಾ, ಎ ಎಸ್ ಐ ಚಂದ್ರಪ್ಪ ದಪೇದರ್ ಚಂದ್ರಶೇಖರ್ ಮಂಜಪ್ಪ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಸಹ ಉಪಸ್ಥಿತರಿದ್ದರು.