ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎಂ.ಪಿ ರೇಣುಕಾಚಾರ್ಯ ರವರು ಜನವರಿ-2023 ಮಾಹೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಜ.5. ಗುರುವಾರ ಮ. 3.00 ಕ್ಕೆ ಬೆಂಗಳೂರಿನಿಂದ ಹೊರಟು, ಸಂ.7 ಕ್ಕೆ ಜಿಲ್ಲೆಯ ಜಿ.ಎಂ.ಐ.ಟಿ ಯಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಜಿಲ್ಲಾ ವಿಭಾಗದ ಎಲ್ಲಾ ಸದಸ್ಯರು, ಶಾಸಕರು, ವಿ.ಪ ಸದಸ್ಯರು ಹಾಗೂ ಪಕ್ಷದ ಜಿಲ್ಲಾಧ್ಯಕ್ಷರುಗಳ ಸಭೆಯಲ್ಲಿ ಭಾಗವಹಿಸಿ, ಸಕ್ರ್ಯೂಟ್ ಹೌಸ್ನಲ್ಲಿ ವಾಸ್ರವ್ಯ ಹೂಡುವರು.
ಜ..6. ಶುಕ್ರವಾರ ಬೆ.11.30 ಕ್ಕೆ ತ್ರಿಶೂಲ ಸಭಾಭವನದಲ್ಲಿ ನಡ್ಡಾ ಅವರ ಅಧ್ಯಕ್ಷತೆಯ ಸಭೆಯಲ್ಲಿ ಭಾಗವಹಿಸುವರು. ಮ.1.30ಕ್ಕೆ ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ನಡೆಯುವ ಶ್ರೀ ಬನಶಂಕರೀದೇವಿ ಬನದ ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮ.2.30ಕ್ಕೆ ಹೊನ್ನಾಳಿಗೆ ತಲುಪಿ, ಸಾರ್ವಜನಿಕರ ಕುಂದುಕೊರತೆಗಳ ಅಹ್ವಾಲುಗಳನ್ನು ಸ್ವೀಕರಿಸಿ, 4.30ಕ್ಕೆ ಹೊನ್ನಾಳಿಯಿಂದ ಹೊರಟು ಸಂ.5 ಕ್ಕೆ ಸುರಹೊನ್ನೆ ಗ್ರಾಮದಲ್ಲಿ ಶ್ರೀ ಬನಶಂಕರಿ ಶ್ರೀ ಕರಿಯಮ್ಮ ದೇವಿ ಹಾಗೂ ಶ್ರೀ ರಾಮ ದೇವರುವಳ ರತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು
ಸಂ. 6.30ಕ್ಕೆ ಗೊಲ್ಲರಹಟ್ಟಿ ತಲುಪಿ, ಗೊಲ್ಲರಹಟ್ಟಿ ಗ್ರಾಮದಲ್ಲಿಯ ಸ.ಹಿ.ಪ್ರಾ.ಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ 8.30ಕ್ಕೆ ಹೊನ್ನಾಳಿ ತಲುಪಿ ವಾಸ್ತವ್ಯ ಹೂಡುವರು.
ಜ.7. ಶನಿವಾರ ಬೆ.10ಕ್ಕೆ ಹೊನ್ನಾಳಿ ಮೂಲಕ ಹೊರಟು, ಬೆ. 10.30 ರಿಂದ ಸಂ.7.00 ಗಂಟೆ ವರೆಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ/ಶಂಕು ಸ್ಥಾಪನೆ ನೆರವೇರಿಸುವುದು. ನಂತರ ಹೊನ್ನಾಳಿಗೆ ತಲುಪಿ ವಾಸ್ತವ್ಯ ಹೂಡುವುದು.
ಜ.8.ಭಾನುವಾರ ಬೆ.10.30ಕ್ಕೆ ಹೊನ್ನಾಳಿ ಯಿಂದ ಹೊರಟು ಬೆ.11 ಕ್ಕೆ ಸ.ಪೌ.ಶಾಲೆ ,ಕೋಟೆಹಾಳ್ ನಲ್ಲಿ ಶ್ರೀ ಮಂಜುನಾಥೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿರುವ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ.1230ಕ್ಕೆ ಕೋಟೆಹಾಳ್ ನಿಂದ ಹೊರಟು, ಮ.1 ಕ್ಕೆ ಸಾಸ್ವೆಹಳ್ಳಿ ಗ್ರಾಮದಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ವೃತ್ತದ ಉದ್ಘಾಟನೆ ನೆರವೇರಿಸುವುದು. ಮ.1.45 ಕ್ಕೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳ ಗ್ರಾಮಗಳಿಗೆ ಭೇಟಿ ನೀಡಿ,. ನಂತರ ಹೊನ್ನಾಳಿಗೆ ತಲುಪಿ ವಾಸ್ತವ್ಯ ಹೂಡುವುದು.
ಜ.9 ಸೋಮವಾರ ಬೆ.10.30 ಕ್ಕೆ ಹೊನ್ನಾಳಿ ಪಟ್ಟಣದ ಶಾದಿ ಮಹಲ್‍ನಲ್ಲಿ ನಡೆಯುವ ಉರ್ದು ಶಾಲೆಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬೆ. 11.30 ಕ್ಕೆ ಹೊನ್ನಾಳಿ ಯಿಂದ ಹೊರಟು, ಮ. 12.00 ರಿಂದ 7.00 ಗಂಟೆ ವರೆಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ/ ಶಂಕುಸ್ಥಾಪನೆ ನೆರವೇರಿಸಿದ ನಂತರ ಹೊನ್ನಾಳಿಗೆ ತಲುಪಿ ವಾಸ್ತವ್ಯ. ಹೂಡುವುದು.
ಜ.10 ಮಂಗಳವಾರ ಬೆ. 10 ಕ್ಕೆ ಹೊನ್ನಾಳಿಯಿಂದ ಹೊರಟು, ಬೆ:10:30ರಿಂದ ಮ:2:00ರವರೆಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ/ ಶಂಕುಸ್ಥಾಪನೆ ನೆರವೇರಿಸುವುದು. ನಂತರ ಹೊನ್ನಾಳಿಗೆ ಪ್ರಯಾಣಿಸಿ ಮ. 3 ಕ್ಕೆ ಹೊನ್ನಾಳಿ-ಬೆಂಗಳೂರು ರಸ್ತೆ ಮೂಲಕ ಬೆಂಗಳೂರಿಗೆ ಪ್ರಯಾಣಿಸುವುದು ಎಂದು ವಿಶೇಷ ಕರ್ತವ್ಯಾಧಿಕಾರಿ ಕೆ. ಸುರೇಶ್ ತಿಳಿಸಿದ್ದಾರೆ.