ನ್ಯಾಮತಿ :ಪಟ್ಟಣ ಮಧ್ಯಭಾಗದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನ ಕಮಿಟಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಸಹ ಬನದಹುಣ್ಣಿಮೆ ಅಂಗವಾಗಿ ಶುಕ್ರವಾರದಂದು ಇಂದು ಶ್ರೀ ಬನಶಂಕರಿ ದೇವಿ ಉತ್ಸವಮೂರ್ತಿಯೊಂದಿಗೆ ರಥೋತ್ಸವ ಹಾಗೂ ವೀರಭದ್ರ ಸ್ವಾಮಿಯ ಷರಬಿಗುಗ್ಗಳ, ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವವನ್ನು ಡೊಳ್ಳು ಭಜನೆ ವೀರಗಾಸೆ ಮಂಗಳವಾದ್ಯದೊAದಿಗೆ ಭಕ್ತಾದಿಗಳು ರಥವನ್ನು ಎಳೆದುಕೊಂಡು ಪಟ್ಟಣದ ಪ್ರಮುಖ ರಾಜಭೀದಿಗಳಲ್ಲಿ ತೆರಳಿ ರಥೋತ್ಸವ ಜರುಗಿತು.
ಹೊನ್ನಾಳಿ ಹಿರೇಕಲ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವದಲ್ಲಿ ಧಾರ್ಮಿಕ ಸಭೆಯ ನಡೆಯಿತು.
ಶ್ರೀ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹೊನ್ನಾಳಿ ಶ್ರೀಗಳು ಯಾವುದೇ ದೇವಸ್ಥಾನವಾಗಲಿ ಮಠಗಳಾಗಲಿ, ಮನುಷ್ಯನ ಸಹಕಾರದಿಂದ ಒಳ್ಳೆಯ ಗುಣಗಳಿಂದ ದೇವರ ಪೂಜೆ ಪುನÀಸ್ಕಾರ ಮಾಡುವುದರಿಂದ ಪುಣ್ಯ ಬರುತ್ತದೆ, “ಹಣ ಇದ್ದಾಗ ಭಕಿ”್ತ ,”ನೆಣ (ಶಕ್ತಿ) ಇದ್ದಾಗ ಸೇವೆ”, “ಗುಣವಿದ್ದಾಗ ಭಕ್ತಿ ಪ್ರಾಪ್ತಿ” ಯಾಗಲಿಕ್ಕೆ ಸಾಧ್ಯ, ಶ್ರೇಷ್ಠ ಗುರುವಿನಿಂದ ಆಶೀರ್ವಾದ ಪಡೆದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿ, ಬನಶಂಕರಿ ದೇವಸ್ಥಾನದ ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಸದಾ ಇರಲಿ ಎಂದು ಮಾತಿಗೆ ವಿರಾಮ ನೀಡಿದರು.


ಬನಶಂಕರಿ ದೇವಸ್ಥಾನ ಕಮಿಟಿಯ ವತಿಯಿಂದ ಗುರುಗಳಿಗೆ ಭಕ್ತಿ ಸಮರ್ಪಣೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ವಾಗೀಶ್ ನುಚ್ಚಿನ್, ಎನ್ ಡಿ ಪಂಚಣ್ಣ, ಲಿಂಗರಾಜ್. ತರಕಾರಿ ಚೆನ್ನೇಶ್. ಮಲ್ಲಿಕಾರ್ಜುನ್ ,ವೀರೇಶ್ ಹಲಗೇರಿ, ದೇವಸ್ಥಾನ ಕಮಿಟಿ ಅಧ್ಯಕ್ಷರು ಉಪಾಧ್ಯಕ್ಷರು ಎಲ್ಲಾ ಸರ್ವ ಸದಸ್ಯರು ಹಾಗೂ ಭಕ್ತಾದಿಗಳು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *