ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಇಲಾಖೆಯಲ್ಲಿ ರಾಷ್ಟಿçÃಯ ಆರೋಗ್ಯ ಅಭಿಯಾನದ
ಕಾರ್ಯಕ್ರಮ/ಯೋಜನೆಗಳಡಿಯಲ್ಲಿ ತೀವ್ರ
ಪ್ರಚಾರಾಂದೋಲನದ ಮೂಲಕ ಜನಜಾಗೃತಿ ಮೂಡಿಸಲು
ಸಾಂಗ್ ಮತ್ತು ಡ್ರಾಮಾ ಡಿವಿಜನ್, ಕನ್ನಡ ಮತ್ತು ಸಂಸ್ಕೃತಿ
ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
ಇಲಾಖೆಯಲ್ಲಿ ನೋಂದಣಿಯಾಗಿರುವ ಬೀದಿನಾಟಕ ಜಾನಪದ
ಕಲಾ ತಂಡಗಳಿAದ ಮಾತ್ರ ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ಬೀದಿ ನಾಟಕ ಹಾಗೂ ಜಾನಪದ ಕಲಾ ತಂಡದಲ್ಲಿ ೮ ಜನ
ಕಲಾವಿದರಿದ್ದು, ಅದರಲ್ಲಿ ಕಡ್ಡಾಯವಾಗಿ ಇಬ್ಬರು
ಮಹಿಳೆಯರು ಹಾಗೂ ಒಬ್ಬರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ
ವರ್ಗಕ್ಕೆ ಸೇರಿದ ಕಲಾವಿದರಿರಬೇಕು. ಅರ್ಜಿ ಸಲ್ಲಿಸುವ
ಕಲಾತಂಡಗಳು ಕಡ್ಡಾಯವಾಗಿ ನೋಂದಣಿಯು
ಪ್ರತಿವರ್ಷ ನವೀಕರಣಗೊಂಡಿರಬೇಕು. ಹಾಗೂ ಇಲಾಖೆಯ
ಯೋಜನೆಗಳ ಬಗ್ಗೆ ಬೀದಿನಾಟಕ ಪ್ರದರ್ಶಿಸಿದ ಅನುಭವ
ಹೊಂದಿರಬೇಕು. ಕಲಾವಿದರು ದಾವಣಗೆರೆ ಜಿಲ್ಲೆಯ
ನಿವಾಸಿಗಳಾಗಿರಬೇಕು. ಅರ್ಜಿ ಸಲ್ಲಿಸಲು ಜ.೧೨ ಕೊನೆ ದಿನವಾಗಿದೆ.
ಆಯ್ಕೆ ಪ್ರಕ್ರಿಯೆಯ ದಿನಾಂಕವನ್ನು ಜಿಲ್ಲಾ ಆರೋಗ್ಯ
ಮತ್ತು ಕು.ಕ.ಕಚೇರಿಯ ಫಲಕದಲ್ಲಿ
ಪ್ರಕಟಿಸಲಾಗುವುದು.ಅಥವಾ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ
ಮಾರ್ಗದರ್ಶನದಂತೆ ಕ್ರಮಕೈಗೊಳ್ಳಲಾಗುವುದು.
ಕಲಾತಂಡಗಳು ಕಡ್ಡಾಯವಾಗಿ ಪ್ರದರ್ಶನ ನೀಡಬೇಕು.
ಸಂದರ್ಶನಕ್ಕೆ ಹಾಜರಾಗುವ ಕಲಾತಂಡಗಳು ಅಥವಾ

ಕಲಾವಿದರು ತಮ್ಮ ಖರ್ಚು ವೆಚ್ಚದಲ್ಲಿಯೇ ಸಂದರ್ಶನಕ್ಕೆ
ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಕಚೇರಿ, ಐ.ಇ.ಸಿ ವಿಭಾಗ ರೂ.ನಂ.೦೩ಕ್ಕೆ ಖುದ್ದಾಗಿ ಭೇಟಿ
ನೀಡಬಹುದೆಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *