ಕನ್ನಡ ಮತ್ತು ಸಂಸ್ಕøತಿ ಇಲಾಖೆವತಿಯಿಂದ ಪ್ರಸಕ್ತ ಸಾಲಿನ ವಿಶೇಷ ಘಟಕ/ ಗಿರಿಜನ ಉಪಯೋಜನೆಯಡಿ ಸಾಮಾಜಿಕ ಅರಿವು ಮೂಡಿಸುವ ಬೀದಿನಾಟಕ ಪ್ರದರ್ಶನ ಆಯೋಜಿಸಲಾಗಿದ್ದು ಅರ್ಹ ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅನುಸೂಚಿತ ಜಾತಿ ಮತ್ತು ಪಂಗಡದ ದೌರ್ಜನ್ಯ  ಅಧಿನಿಯಮದಲ್ಲಿರುವ ಅಸ್ಪøಶ್ಯತೆ ನಿವಾರಣೆ ವಿಷಯವನ್ನು  ಸಾರ್ವಜನಿಕರಿಗೆ/ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಹಿನ್ನಲೆಯಲ್ಲಿ ಬೀದಿನಾಟಕ ಪ್ರದರ್ಶನ ಆಯೋಜಿಸಲು ಉದ್ದೇಶಿಸಲಾಗಿದೆ.  ಕಲಾತಂಡಗಳನ್ನು ಆಯ್ಕೆ ಮಾಡಿ ಸೂಕ್ತ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಜಿಲ್ಲೆಯ ನುರಿತ ಪ.ಜಾ/ಪ.ಪಂ. ದ ಬೀದಿ ನಾಟಕ ಕಲಾ ತಂಡಗಳಿಂದ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಕಲಾತಂಡದ ಎಲ್ಲಾ ಸದಸ್ಯರು ಕಡ್ಡಾಯವಾಗಿ ಪ.ಜಾ/ಪ.ಪಂ ಕ್ಕೆ ಸೇರಿದವರಾಗಿರಬೇಕು. ಕಲಾತಂಡಗಳನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಲಾಗುತ್ತದೆ. ತಂಡದ ಎಲ್ಲಾ ಕಲಾವಿದರು ಇತ್ತೀಚಿನ  ಆರ್.ಡಿ ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರ, ವಯಸ್ಸಿನ ಅಗತ್ಯ ದಾಖಲೆ, ಆಧಾರ್ ಕಾರ್ಡ್,  ಪಡಿತರ ಚೀಟಿ ಹಾಗೂ ಬ್ಯಾಂಕ್ ಖಾತೆ ಮಾಹಿತಿಯ ನಕಲು ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಲು ತಿಳಿಸಲಾಗಿದೆ.
ತಂಡದ ಆಯ್ಕೆಯಲ್ಲಿ ಮಹಿಳಾ ಮತ್ತು ಅಂಗವಿಕಲ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಪ್ರತಿ ತಂಡದಲ್ಲಿ  10 ರಿಂದ 15 ಜನ ಕಲಾವಿದರು ಒಳಗೊಂಡಿರಬೇಕು. ಆಯ್ಕೆ ಬಯಸುವ ತಂಡವು ಕನಿಷ್ಟ ಮೂರು ಯಶಸ್ವಿ ಬೀದಿನಾಟಕ ಪ್ರದರ್ಶಿಸಿದ ಅನುಭವ ಹೊಂದಿರಬೇಕು. ಈ ಕುರಿತಂತೆ ಸೂಕ್ತ ದಾಖಲೆಯನ್ನು ಸಲ್ಲಿಸಬೇಕು.
ದಿ:16.01.2023 ರೊಳಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ದಾವಣಗೆರೆ  ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ. ಸಂ. 08192-234849 ಅನ್ನು ಸಂಪರ್ಕಿಸಲು ಕೋರಲಾಗಿದೆ.
===

Leave a Reply

Your email address will not be published. Required fields are marked *