ನ್ಯಾಮತಿ :ತಾಲೂಕ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ ನ್ಯಾಮತಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಶಪ್ಪ ನೆರವೇರಿಸಿದರು.
ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಶಪ್ಪ ನಂತರ ಮಾತನಾಡಿ ಕಲಿಕಾ ಹಬ್ಬದಲ್ಲಿ ಕ್ಲಸ್ಟರ್ ಮಟ್ಟದ ಒಟ್ಟು ೧೧ ಸರ್ಕಾರಿ ಶಾಲೆಗಳಿಂದ ೧೨೦ ವಿದ್ಯಾರ್ಥಿಗಳು ಕಲಿಕೆಯ ಸಂಭ್ರಮದಲ್ಲಿ ಭಾಗವಹಿಸಿದ್ದು ಬಹಳ ಸಂತೋಷದ ವಿಷಯ ಪ್ರತಿಯೊಂದು ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಭಾಗವಹಿಸಿ ಉತ್ತಮ ಶಿಕ್ಷಣ ಕಲಿತು ,ತರಗತಿಗಳಲ್ಲಿ ಕಲಿತ ಹಲವಾರು ಚಟುವಟಿಕೆ ಮಾಡಿ ಪ್ರದರ್ಶಿಸಿದರು. ಕಲಿಕೆ ಉತ್ತಮ ಪಡಿಸಲು ಕಲಿಕಾ ಹಬ್ಬವನ್ನು ಸರ್ಕಾರ ರಾಜ್ಯಾದ್ಯಂತ ವಿಶೇಷವಾಗಿ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ನಿರೂಪಣೆ: ರಾಘವೇಂದ್ರ ಜಿಟಿ ಶಿಕ್ಷಕರು ನಡೆಸಿಕೊಟ್ಟರು.


ಸ್ವಾಗತ: ಶ್ರೀಮತಿ ಗಿರಿಜಮ್ಮಉಪ ಪ್ರಾಂಶುಪಾಲರು ನಡೆಸಿಕೊಟ್ಟರು.
ಅಧ್ಯಕ್ಷತೆ :ರಾಮಕೃಷ್ಣ ಎಸ್‌ಡಿಎಂಸಿ ಸದಸ್ಯರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಾಲೂಕು ಮಟ್ಟದ ದೈಹಿಕ ಶಿಕ್ಷಣಾಧಿಕಾರಿಗಳಾದ ಈಶ್ವರಪ್ಪ ವಹಿಸಿದ್ದರು.
ಈ ಸಂದರ್ಭದಲಿ;್ಲ ಹೊನ್ನಾಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಂಗನಾಥ್, ಪ್ರೌಢಶಾಲಾ ಶಿಕ್ಷಕ ಸಂಘದ ತಾಲೂಕ ಅಧ್ಯಕ್ಷರಾದ ಆಂಜನೇಯ, ಪ್ರೌಢ ಸರಕಾರಿ ನೌಕರ ಸಂಘದ ತಾಲೂಕ ಕಾರ್ಯದರ್ಶಿ ಸಿದ್ದೇಶಪ್ಪ ಜಿಗಣ ಪಾರ್, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಮ್ ಸಿದ್ದಪ್ಪ ,ಸಿಆರ್ ಪಿ ಚಂದ್ರನಾಯಕ್, ಎಂ ಮಲ್ಲಿಕಾರ್ಜುನ್ ಮತ್ತು ಈ ಶಾಲೆಯ ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *