ಅರ್ಥಿಕವಾಗಿ ಹಿಂದುಳಿದ
ಅಲ್ಪಸಂಖ್ಯಾತರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವು
ಮೂಡಿಸುವ ಉದ್ದೇಶದಿಂದ ರಾಜ್ಯವ್ಯಾಪ್ತಿ 22 ಜಿಲ್ಲೆಗಳಲ್ಲಿ
ಜಾಗೃತಿ ಸಮಾವೇಶಗಳನ್ನು ಆಯೋಜಿಸಲಾಗಿದೆ ಎಂದು
ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜೆ. ಕೆನಡಿ
ಶಾಂತಕುಮಾರ್ ಅವರು ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ
ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತರ
ಕಲ್ಯಾಣ ಇಲಾಖೆ ವತಿಯಿಂದ ಕಲ್ಯಾಣ ಕಾರ್ಯಕ್ರಮಗಳ
ಜಾಗೃತಿ ಮತ್ತು ಯೋಜನೆಗಳ ಅರಿವು ಮೂಡಿಸಲು ರಾಜ್ಯ
ಪ್ರವಾಸ ಮಾಡಲಾಗುತ್ತಿದೆ ಎಂದರು.
ಬೀದರ್, ಗುಲ್ಬರ್ಗ, ರಾಯಚೂರು, ಯಾದಗಿರಿ,
ಕೊಪ್ಪಳಗಳಲ್ಲಿ ಸುಮಾರು 200ವರ್ಷಗಳ
ಹಳೆಯದಾದ ಚರ್ಚುಗಳು ಜೀರ್ಣೋದ್ಧಾರವಿಲ್ಲದೆ
ನಶಿಸುತ್ತಿರುವುದನ್ನು ಗಮನಿಸಿದ ಸರ್ಕಾರ ಚರ್ಚ್‍ಗಳ
ನವೀಕರಣ ಕಾರ್ಯ ಕೈಗೊಂಡಿದೆ. ಕ್ರಿಶ್ಚಿಯನ್‍ರಿರುವ
ಪ್ರದೇಶಗಳಲ್ಲಿ ವಿವಾಹ ಹಾಗೂ ಹಲವು
ಕಾರ್ಯಕ್ರಮಗಳು ಕಡಿಮೆ ವೆಚ್ಚದಲ್ಲಿ ಮಾಡಲುವ
ಉದ್ದೇಶದಿಂದ ಸರ್ಕಾರ ಸಮುದಾಯ ಭವನಗಳನ್ನು
ನಿರ್ಮಾಣ ಮಾಡಿದೆ. 100 ವರ್ಷ ಮೇಲ್ಪಟ್ಟ ಚರ್ಚ್‍ಗಳ
ಅಭಿವೃದ್ಧಿಗೆ ರೂ.50ಲಕ್ಷ ನೀಡಲಾಗುತ್ತಿದೆ ಹಾಗೂ
ವಿದೇಶಗಳಲ್ಲಿ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ
ಅನುದಾನ ನೀಡಲಾಗುತ್ತಿದೆ. ಅಲ್ಪ ಸಂಖ್ಯಾತರ ಕಲ್ಯಾಣ
ಇಲಾಖೆ, ರೇಷ್ಮೆ, ಪಶು ಸಂಗೊಂಪನಾ ಇಲಾಖೆ ಸೇರಿದಂತೆ
ಸರ್ಕಾರದ 13 ಇಲಾಖೆಗಳಲ್ಲಿ ಶೇ.8ರಷ್ಟು ಮಿಸಲಾತಿ ನೀಡಿದೆ
ಎಂದರು.
ಜಿಲ್ಲಾ ವ್ಯಾವಸ್ಥಪಕ ಸೈಯದ್ ನಜಿಮ್, ಅಲ್ಪಾ
ಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಮಠದ
ಉಪಸ್ಥಿತರಿದ್ದರು.