ನ್ಯಾಮತಿ: ತಾಲೂಕಿನ ದಾನಳ್ಳಿ ಗ್ರಾಮದಲ್ಲಿರುವ ಶ್ರೀ ತರುಳುಬಾಳು ಜಗದ್ಗುರು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವತಿಯಿಂದ 20 23ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ನ್ಯಾಮತಿ ತಾಲೂಕು ಸಾಧು ಲಿಂಗಾಯತ ಸಮಾಜದ ಅಧ್ಯಕ್ಷರಾದ ಕೊಡಿಕೊಪ್ಪ ಶಿವಣ್ಣನವರು ನೆರವೇರಿಸಿದರು.
ಮಾಜಿ ಶಾಸಕರಾದ ಡಿಜಿ ಶಾಂತನಗೌಡ್ರು ಶ್ರೀ ತರಳಬಾಳು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಗ್ರಂಥಾಲಯ ಕೊಠಡಿಯನ್ನ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನ್ಯಾಮತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ ಆನಂದ್ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಸಮಿತಿಯ ಕಾರ್ಯದರ್ಶಿ, ಮಲ್ಲೇಶಪ್ಪ ಗಂಜಿನಳ್ಳಿ. ಪರಮೇಶ್ವರಪ್ಪ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಡಿಜಿ ವಿಶ್ವನಾಥ್ ,ಹೊನ್ನಾಳಿ ಸಾಧು ಲಿಂಗಾಯತ ಸಮಾಜದ ಅಧ್ಯಕ್ಷರಾದ ಗದಿಗೆಶಣ್ಣ ಎಚ್ಎ, ಶಿವ ಬ್ಯಾಂಕಿನ ಅಧ್ಯಕ್ಷ ಶೈಲೇಶ್, ಮಾಜಿ ಅಧ್ಯಕ್ಷ ಕಾಂತರಾಜ್, ನಿರ್ದೇಶಕರಾದ ಜಯಪ್ಪ ,ಈಶ್ವರಪ್ಪ ಪಿಜಿ ,ನಾಗರಾಜಪ್ಪ, ಸತೀಶ್ ಎಂ ,ಮುಖ್ಯ ಶಿಕ್ಷಕರಾದ ಶ್ವೇತ ಡಿಆರ್ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಸಹ ಉಪಸ್ಥಿತಿಯಲ್ಲಿದ್ದರು.