ಗಿನ್ನೀಸ್ ವಿಶ್ವದಾಖಲೆಗಾಗಿ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜರುಗಿದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಎಂಟು ಸಾವಿರಕ್ಕೂ ಅಧಿಕ ಜನ ಯೋಗ ಪ್ರದರ್ಶನ ನೀಡಿ ಯಶಸ್ವಿಗೊಳಿಸಿದರು
ಭಾನುವಾರ ಮುಂಜಾನೆ ಆರರಿಂದಲೇ ಕ್ರೀಡಾಂಗಣಕ್ಕೆ ಆಗಮಿಸಿದ ಶಾಲಾ ಕಾಲೇಜು ವಿದ್ಯಾಥಿ೯ಗಳು ಯೋಗ ಪಟುಗಳು ಅಧಿಕಾರಿಗಳು ಜನಪ್ರತಿ ನಿಧಿಗಳು ಯೋಗ ಪ್ರದರ್ಶನ ದಲ್ಲಿ ಭಾಗವಹಿಸಿದ್ದರು
ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗ ಪ್ರದರ್ಶನ ಮಾಡಲು ಅನುಕೂಲವಾಗುವಂತೆ ಮೈಕಿಂಗ್ ವ್ಯವಸ್ಥೆ ಮೇಲ್ವಿಚಾರಕರ ವ್ಯವಸ್ಥೆ ಮಾರ್ಗದರ್ಶಕರ ವ್ಯವಸ್ಥೆ ಮಾಡಲಾಗಿತ್ತು ೪೦ ನಿಮಿಷಗಳ ಪ್ರದರ್ಶನ ದಲ್ಲಿ ೩೩ ವಿವಿಧ ಆಸನಗಳ ಪ್ರದರ್ಶನ ಮಾಡಲಾಯಿತು .ಧ್ವನಿ ಮುದ್ರಿತ ಯೋಗ ಮಾರ್ಗದರ್ಶಕರ ಸೂಚನೆ ಹಾಗೂ ಪ್ರಾಯೋಗಿಕವಾಗಿ ಅಲ್ಲಲ್ಲಿ ಯೋಗ ಮೇಲ್ವಿಚಾರಕರ ಪ್ರದರ್ಶನ ಅನುಕರಣೆ ಮಾಡಿ ಯೋಗಾಸನ ಪ್ರದಶಿ೯ಸಿದ ವಿದ್ಯಾಥಿ೯ಗಳು ವಿಶ್ವ ದಾಖಲೆ ಯ ಕಾರ್ಯಕ್ರಮದಲ್ಲಿ ಸಾಕ್ಷಿಯಾದರು
ಕಾರ್ಯಕ್ರಮದಲ್ಲಿ ಸಂಸದರಾದ ಜಿ ಎಂ ಸಿದ್ದೇಶ್ವರ,ದಿಲ್ವಾಧಿಕಾರಿ ಶಿವಾನಂದ ಕಾಪಶಿ, ಜಿ ಪಂ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಡಾ..ಚೆನ್ನಪ್ಪ.ಪೋಲೀಸ್ ವರಿಷ್ಠಾಧಿಕಾರಿಗಳಾದ ರಿಷ್ವಂತ್ ,ವಚನನಂದಶ್ರೀಗಳು ಇತರರು ಉಪಸ್ಥಿತರಿದ್ದರು