ಪಾಲಿಕೆಯ 2022-23 ನೇ ಸಾಲಿನ ಆಯವ್ಯಯವನ್ನು ತಯಾರಿಸಲು ಮತ್ತು ಸಾರ್ವಜನಿಕರು/ಸಂಘ-ಸಂಸ್ಥೆಗಳಿಂದ ಸಲಹೆ ಸೂಚನೆಗಳನ್ನು ಪಡೆಯಲು ಮಹಾಪೌರರ ಅಧ್ಯಕ್ಷತೆಯಲ್ಲಿ ಜ.19 ರಂದು ಮಧ್ಯಾಹ್ನ 3.30ಕ್ಕೆ ಕೌನ್ಸಿಲ್ ಸಭಾಂಗಣದಲ್ಲಿ ಮೊದಲನೆ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
===
ನಶಿಸಿ ಹೋಗುತ್ತಿರುವ ತಳಸಮುದಾಯದ ವಿಶಿಷ್ಟ ಕಲೆಗಳನ್ನು ಮುನ್ನಲೆ ತರಲು ತರಬೇತಿ ಶಿಬಿರ
ದಾವಣಗೆರೆ ಜ. 17 (ಕರ್ನಾಟಕ ವಾರ್ತೆ) : ನಶಿಸಿಹೊಗುತ್ತಿರುವ ತಳಸಮುದಾಯದ ವಿಶಿಷ್ಟ ಕಲೆಗಳನ್ನು ಮುನ್ನಲೆಗೆ ತರಲು ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ತಳಸಮುದಾಯದ ವಿಶಿಷ್ಟ ಕಲೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಲೆಗಳನ್ನು ಕಲಿಯಲು ಆಸಕ್ತಿ ಇರುವ ಜಿಲ್ಲೆಯಲ್ಲಿನ 15 ರಿಂದ 30 ವರ್ಷದ ಒಳಗಿನ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿಗಳನ್ನು ಜ.21 ರೊಳಗೆ ಸ್ವವಿವರದೊಂದಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಚೇರಿಗೆ ಖುದ್ದಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ. ಸಂ. 08192-234849 ಸಂಪರ್ಕಿಸಲು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆÀಯಲ್ಲಿ ತಿಳಿಸಿದ್ದಾರೆ.