ನ್ಯಾಮತಿ: ಪಟ್ಟಣದ ಮಾರಿಕಾಂಬಾ ದೇವಿಯ ಜಾತ್ರೆಗೆ ಮಂಗಳವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಈ ಸಂಬAಧ ದೇವಸ್ಥಾನದಿಂದ ಮಾರಿಕಾಂಬಾ ಉತ್ಸವ ಮೂರ್ತಿ, ವೀರಭದ್ರೇಶ್ವರಸ್ವಾಮಿ ಮತ್ತು ಪ್ರಾಣದೇವರು ಆಂಜನೇಯಸ್ವಾಮಿ ಮೂರ್ತಿಗಳೊಂದಿಗೆ ತುಂಬುವಹಳ್ಳಕ್ಕೆ ಗಂಗಾಪೂಜೆ ನೆರವೇರಿಸಲು ತೆರಳಿ.ಅಲ್ಲಿ ಗಂಗಾಪೂಜೆ ನೆರವೇರಿಸಿ ಮಂಗಳವಾದ್ಯಗಳೊAದಿಗೆ ನೂರಾರು ಮುತ್ತೆöÊದೆಯರು ಕಳಸ ಹೊತ್ತು, ಭಕ್ತರ ಜಯಘೋಷ, ಭಕ್ತಿಯಿಂದ ಕುಣಿಯುತ್ತ ದೇವಸ್ಥಾನಕ್ಕೆ ತಂದು ಕುಳ್ಳಿರಿಸಲಾಯಿತು.
ನಂತರ ಹರಕೆ ಹೊತ್ತ ಭಕ್ತರು ದೇವಿಗೆ ಉಡಿ ತುಂಬುವುದು, ಹೊಳಿಗೆ ಇತರ ಸಿಹಿ ಪದಾರ್ಥವನ್ನು ಮನೆಯಲ್ಲಿ ತಯಾರಿಸಿಕೊಂಡು ಬಂದು ನೈವೇದ್ಯ ಮಾಡಿದರು.ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ಸಾಲಾಗಿ ನಿಂತು ದೇವಿಯ ದರ್ಶನ ಪಡೆದರು
.
ಶಾಸಕ ಎಂ.ಪಿ.ರೇಣುಕಾಚಾರ್ಯದAಪತಿ, ಮಾಜಿ ಶಾಸಕರಾದ ಡಿ.ಜಿ.ಶಾಂತನಗೌಡರು, ಡಾ.ಡಿ.ಬಿ.ಗಂಗಪ್ಪ ಗಂಗಾಪೂಜೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿ ಶಿವಾನಂದಪ್ಪ ಕಾಪಶಿ, ತಹಶೀಲ್ದಾರ್ ಎಂ.ರೇಣುಕಾ, ಇಒ ರಾಮಭೋವಿ, ಎನ್ಜಿಒಅಧ್ಯಕ್ಷ ಜಿ.ಬಿ.ವಿಜಯಕುಮಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಿ.ಕೆ.ಕೊಟ್ರೇಶಿÀ, ಪಿಎಸ್ಐ ಪಿ.ಎಸ್.ರಮೇಶ, ಕಂದಾಯ ಇಲಾಖೆ ಅಧಿಕಾರಿಗಳು ದರ್ಶನ ಪಡೆದರು.