ನ್ಯಾಮತಿ: ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದ ಶ್ರೀ ಹನುಮಂತ ದೇವರ ಜೀರ್ಣೋದ್ಧಾರ ಸಮಿತಿ ಮತ್ತು ಭಕ್ತ ಮಂಡಳಿ ಮಲ್ಲಿಗೇನಹಳ್ಳಿ ಇವರ ವತಿಯಿಂದ ಧನುರ್ಮಾಸದ ವಿಶೇಷ ಪೂಜಾ ಕಾರ್ಯಕ್ರಮವು ಡಿ ೨೩ ರಿಂದ ಪ್ರಾರಂಭಗೊAಡು ಜ ೨೧ ರವರೆಗೆ ಪ್ರತಿನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ಹನುಮಂತ ದೇವರ ಪೂಜಾ ಕೈಂ ಕಾರ್ಯ ಪ್ರಾರಂಭಗೊAಡು ಪ್ರತಿದಿನ ಒಂದರAತೆ ತಿಂಗಳ ಕಾಲ ಬೆಣ್ಣೆ ಪೂಜೆ, ಬ್ಯಾಗಡಿ ಪೂಜೆ, ಕುಂಕುಮ ಪೂಜೆ, ಹೂ ಅಲಂಕಾರದ ಪೂಜೆ ,ತರಕಾರಿ ಪೂಜೆ,ಬಾಳೆ ಹಣ್ಣಿನ ಪೂಜೆ, ನೋಟಿನ ಪೂಜೆ, ಈ ಎಲ್ಲಾ ವಿವಿಧ ಬಗೆಯ ಪೂಜೆ ತಿಂಗಳಿAದ ಮಾಡಿಸಿ, ಅಮಾವಾಸ್ಯೆ ಕೊನೆಯ ದಿನವಾದ ಇಂದು ಹನುಮಂತ ದೇವರು, ಬಸವಣ್ಣ ದೇವರು, ಭೂತಪ್ಪ ದೇವರುಗಳ ಹೂವುಗಳಿಂದ ಅಲಂಕಾರದೊAದಿಗೆ ದಾಸರು, ಹಲಗೆ ,ಜಾಗಟಿ ,ನಪೋರಿ ಹಿಡಿದುಕೊಂಡು ತೆರಳಿದಾಗ ಹನುಮನ ಭಕ್ತರು ತಮ್ಮ ತಮ್ಮ ಮನೆ ಮುಂದೆ ಸಗಣಿ ಸಾರಿಸಿ, ರಂಗೋಲಿ ಹಾಕಿ ಹನುಮ ದೇವರಿಗೆ ಹಣ್ಣು, ಕಾಯಿ ಧೂಪದೊಂದಿಗೆ ಪೂಜೆ ಮಾಡಿಸಿ ತಮ್ಮ ಕಷ್ಟಗಳು ಬಗೆ ಹರಿದು ಇಷ್ಟಾರ್ಥಗಳು ಸಿದ್ಧಿಯಾಗಲಿ ಎಂದು ಕುಳಿತುಕೊಂಡಾಗ ದೇವರು ಅವರನ್ನು ಪ್ರದಕ್ಷಿಣೆ ಮಾಡಿ ಹೋದರೆ ನಮ್ಮ ಪಾಪಗಳು ಪರಿಹಾರ ಆಗುತ್ತವೆ ಎಂದು ಭಕ್ತರು ತಿಳಿಸಿದರು. ಬಂದAತ ಭಕ್ತರಿಗೆ ಪ್ರಸಾದ ವ್ಯವಸ್ಥೆಯು ಸಹ ಮಾಡಿದ್ದರು.ಮಧ್ಯಾಹ್ನ ೧:೦೦ ಗಂಟೆಗೆ ಧಾರ್ಮಿಕ ಸಭೆಯು ನಡೆಯಿತು. ಈ ಸಭೆಯಲ್ಲಿ ದೇವಸ್ಥಾನ ಕಮಿಟಿಯ ಅಧ್ಯಕ್ಷರು ಸದಸ್ಯರು, ಗ್ರಾಮಸ್ಥರು ಸುತ್ತಮುತ್ತಲಿನ ಹಳ್ಳಿಯ ಹನುಮನ ಭಕ್ತರು ಸಹ ಉಪಸ್ಥಿತಿಯಲ್ಲಿದ್ದರು.