ನ್ಯಾಮತಿ: ಇಡೀ ಸೃಷ್ಟಿಯ ಕರ್ತನ ಪಿತಾಮಹಾ ವಿಶ್ವಕರ್ಮರು, ವಿಶ್ವಕರ್ಮರು ಆವರಿಸಿದ ಕ್ಷೇತ್ರಗಳಲ್ಲಿ ಅವರ ಪಾತ್ರವಿಲ್ಲದ ಜಾಗಗಳಿಲ್ಲ ಎಂದು ಬೆಳಗುತ್ತಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತುಅಧ್ಯಕ್ಷಎಂ.ಜಿ.ಕವಿರಾಜ ಪ್ರತಿಪಾದಿಸಿದರು.
ಸಮೀಪದ ಸುರಹೊನ್ನೆ ಗ್ರಾಮದಲ್ಲಿನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶಾಂಭವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ನಡೆದ ದತ್ತಿಉಪನ್ಯಾಸ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಬ್ರಾಹ್ಮಣರು ನಾಡಿಗೆ ನೀಡಿದಕೊಡುಗೆ ಕುರಿತು ದತ್ತಿಉಪನ್ಯಾಸ ನೀಡಿದರು.
ಸರ್ಕಾರಿ ಪದವಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಜಿ.ಪಿ.ರಾಘವೇಂದ್ರ ಜಾನಪದ ಸಾಹಿತ್ಯದಲ್ಲಿ ಬರುವ ತಂದೆ, ತಾಯಿ ಮಕ್ಕಳು, ಅತ್ತೆ, ಸೊಸೆ ಹಾಗೂ ಸಮಾಜದಲ್ಲಿ ಪರಸ್ಪರ ಬದುಕುವ ರೀತಿಯನ್ನು ಜಾನಪದ ಸಾಹಿತ್ಯದಲ್ಲಿಕಾಣಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಕೆ. ಲಿಂಗಪ್ಪ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ಕಾಲ್ಪನಿಕ ವ್ಯಕ್ತಿಎಂದು ಬಿಂಬಿಸಲು ಕೆಲವರು ಹೊರಟಿರುವುದು ವಿಷಾಧಿನೀಯ. ಪ್ರಾಥಮಿಕ ಹಂತದಲ್ಲಿಯೇ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಬೇಕಿದೆ ಎಂದರು.
ದತ್ತಿ ದಾನಿಗಳಾದ ನಾಗರಾಜಪ್ಪ ಅರ್ಕಾಚಾರ್ ಮತ್ತು ಸಹೋದರರು ಹಾಗೂ ಡಾ.ಡಿ.ಬಸವರಾಜಪ್ಪ ಅವರನ್ನು ಸನ್ಮಾನಿಸಲಾಯಿತು.
ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಪ್ರಾಸ್ತಾವಿಕ ಮಾತನಾಡಿದರು.
ನಿಕಟಪೂರ್ವಅಧ್ಯಕ್ಷ ಜಿ. ನಿಜಲಿಂಗಪ್ಪ, ಗೌರವ ಕಾರ್ಯದರ್ಶಿ ಎಸ್.ಜಿ.ಬಸವರಾಜಪ್ಪ, ಸಂಘಟನಾ ಕಾರ್ಯದರ್ಶಿ ಎಂ.ಎಸ್.ಜಗಧೀಶ, ಕಸಾಪ ನಿರ್ದೇಶಕರಾದ ಜಂಗ್ಲೀಚAದನ, ಎಂ.ಲೋಕೇಶ್ವರಯ್ಯ, ಚಂದ್ರೇಗೌಡ, ಕುಂಬಾರತೀರ್ಥಪ್ಪ, ಜಿ.ಕುಬೇರಪ್ಪ, ಸೈಯದ್‌ಅಕ್ಬರ್ ಬಾಷ, ಸತೀಶ ಬಿದರಗಡ್ಡೆ, ಕೃಷ್ಣಮೂರ್ತಿ, ಮುಖ್ಯೋಪಾಧ್ಯಾಯ ಡಿ.ಜಿ.ರಘುನಾಥ, ಶಾಲೆಯ ಸಹಶಿಕ್ಷಕರು ಇದ್ದರು.