ನ್ಯಾಮತಿ: ನಗರದಲ್ಲಿರುವ ಶ್ರೀ ದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಇಂದು ದುರ್ಗಾಂಬಾ ದೇವಿಗೆ ಪೂಜಾ ಕಾರ್ಯ ಬೆಳಗಿನ ಜಾವ ೬:೦೦ ಗಂಟೆಗೆ ಸಮಯಕ್ಕೆ ದೇವಿಗೆ ಪಂಚಾಮೃತ ಅಭಿಷೇಕ ಮಾಡಿ ಪೂಜಾ ಕೈಂ ಕಾರ್ಯದೊಂದಿಗೆ ನೆರವೇರಿಸಲಾಯಿತು. ನಂತರ ನ್ಯಾಮತಿ ಮತ್ತು ಸುತ್ತಮುತ್ತಲಿನ ಗ್ರಾಮದ ಸರ್ವ ಸಮಾಜದ ಭಕ್ತಾದಿಗಳು ಮತ್ತು ಮುತ್ತೈದೆಯರು ,ಅಡಿಕೆ ,ಎಲೆ ,ಅಕ್ಕಿ, ಅರಿಶಿಣ, ಕುಂಕುಮ, ಕೊಬ್ಬರಿ ,ಉತ್ತತ್ತಿ, ಬಳೆ ,ರವಿಕೆ ಸೇರಿದಂತೆ ಉಡುಕ್ಕಿಯನ್ನು ದೇವಿಗೆ ಸಮರ್ಪಿಸಿ ಭಕ್ತಿಗೆ ಪಾತ್ರರಾದರು. ನಂತರ ರಾತ್ರಿ ೯:೦೦ಗಂಟೆಗೆ ಮಹಾ ಮಂಗಳಾರತಿಯೊAದಿಗೆ ಪೂಜಾ ಕಾರ್ಯ ಮುಕ್ತಾಯಗೊಳ್ಳುವುದು ಎಂದು ದೇವಸ್ಥಾನ ಅರ್ಚಕರು ತಿಳಿಸಿದರು.