ನ್ಯಾಮತಿ :ತಾಲೂಕು ಸೂರಗೊಂಡನಕೊಪ್ಪಕ್ಕೆ ಮಹಾರಾಷ್ಟ್ರ ಸರ್ಕಾರದ ಆಹಾರ ಮತ್ತು ಔಷಧ ಸಚಿವ ಸಂಜಯ್ ರಾಥೋಡ್ ರವರು ಶ್ರೀ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಿಯ ದರ್ಶನವನ್ನು ಪಡೆದು ಬೊಗ್ ಪೂಜಾ ಕೈಂ ಕರ್ಯದಲ್ಲಿ ಭಾಗಿಯಾದರು. ಸಚಿವ ಸಂಜಯ್ ರಾಥೋಡ್ ನಂತರ ಮಾತನಾಡಿ ಮಹಾರಾಷ್ಟ್ರದ ಸರ್ಕಾರದ ವತಿಯಿಂದ ಫೆ ೧೨ರಂದು ನಡೆಯುವ ೫೯೩ ಕೋಟಿ ವೆಚ್ಚದ ಪೌರಾದೇವಿ ಸಮಗ್ರ ಅಭಿವೃದ್ಧಿ ಯೋಜನೆ ಭೂಮಿ ಪೂಜೆ ನೆರವೇರಲಿದ್ದು ಅದರ ಅಂಗವಾಗಿ ಶ್ರೀ ಸಂತ ಸೇವಾಲಾಲ್ ದೇವಸ್ಥಾನದಿಂದ ಗಂಗಾಜಲ ಮತ್ತು ಸೇವಾಲಾಲ್ ರವರ ಪೇಟ,, ಪಾದುಕೆ, ಕಾಟಿ ತೆಗೆದುಕೊಂಡು ಹೋಗಲಿಕ್ಕೆ ಇಲ್ಲಿಗೆ ಬಂದಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ. ಡಾ. ಎಲ್ ಈಶ್ವರ್ ನಾಯ್ಕ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತಿಯಲ್ಲಿದ್ದರು.