ಹುಣಸಘಟ್ಟ: ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಹೋಬಳಿ ಕೇಂದ್ರದಲ್ಲಿ ಕನ್ನಡ ಅಭಿಮಾನಿ ಹುಡುಗರು ಒಬ್ಬ ದಾನಿಯಿಂದ ಆರ್ಥಿಕ ನೆರವು ಪಡೆದು ನಿರ್ಮಾಣ ಮಾಡಿದ್ದ ಕನ್ನಡ ಧ್ವಜಸ್ತಂಭವನ್ನು ಜೆಸಿಪಿ ಬಳಸಿ ಕೆಡವಿ ಹಾಕಿದ ಸರ್ಕಾರಿ ಅಧಿಕಾರಿ ಗಳಿಗೆ ತಕ್ಷಣ ಶಿಸ್ತು ಕ್ರಮ ಜರುಗಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಧ್ಯಕ್ಷ ಕುರುವ ಗಣೇಶ ಹೇಳಿದರು
ಸಾಸ್ವೆಹಳ್ಳಿ ಹೋಬಳಿ ಕೇಂದ್ರದಲ್ಲಿ ಕನ್ನಡ ಧ್ವಜಸ್ತಂಬ ಕೆಡವಿದ ಸ್ಥಳಕ್ಕೆ ಮಂಗಳವಾರ ತಾಲೂಕು, ಜಿಲ್ಲಾ ಹಾಗೂ ರಾಜ್ಯದ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಧ್ವಜಸ್ತಂಬ ಕೆಡವಿದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿ ಮಾತನಾಡಿದ ಅವರು ಕೆಡವಿದ ಕನ್ನಡ ಧ್ವಜಸ್ಥಂಭ ನೋಡಿದಾಗ ನಿಜವಾದ ಕನ್ನಡಿಗರಿಗೆ ನೋವಾಯಿತು. ಧ್ವಜ ನಿರ್ಮಾಣ ಮಾಡಿರುವ ಜಾಗ ಯಾವ ಸಾರ್ವಜನಿಕರಿಗೂ ತೊಂದರೆಯಾಗಿರುವುದಿಲ್ಲ. ಕನ್ನಡ ನಾಡು ನುಡಿ ನೆಲ ಜಲ ಉಳಿವಿಗಾಗಿ ಅನೇಕ ಹೋರಾಟ ಮಾಡಿಕೊಂಡು ಬಂದಿರುವುದನ್ನು ಇತಿಹಾಸಿದಲ್ಲಿ ಓದಿದ್ದೇವೆ. ತಾಲೂಕಿನ ಇತಿಹಾಸ ಪುರುಷರಲ್ಲಿ ಸ್ವಾತಂತ್ರ ಸೇನಾನಿ ಹೋರಾಟಗಾರ ಹೆಚ್ ಎಸ್ ರುದ್ರಪ್ಪ ನವರು ಜನಿಸಿದ ಈ ನೆಲದಲ್ಲಿ ಕನ್ನಡ ತಾಯಿ ಭುವನೇಶ್ವರಿ ಧ್ವಜಸ್ಥಂಭ ಕೆಡವಿರುವುದನ್ನು ನೋಡಿ ನಮಗೆ ನೋವಾಯಿತು. ಧಿಕ್ಕಾರ ಕೂಗಿದೆವು ಇದರ ಹಿಂದೆ ಯಾರೇ ಇರಲಿ ಬಲಿಷ್ಠ ರಾಜಕಾರಣಿಯಾಗಿರಲಿ, ಅಧಿಕಾರಿಯಾಗಿರಬಹುದು ತಾಲೂಕು ದಂಡಾಧಿಕಾರಿಗಳು ತನಿಖೆ ಮಾಡಿ ನಮಗೆ ವರದಿ ನೀಡದಿದ್ದರೆ ಅಲ್ಲಿ ನಾವು ಧ್ವಜಸ್ಥಂಭ ನಿರ್ಮಾಣ ಮಾಡೇ ಮಾಡುತ್ತೇವೆ. ಯಾವ ದುಷ್ಟ ಶಕ್ತಿಗಳಿಗೂ ಹೆದರುವುದಿಲ್ಲ ಅಂಜುವುದಿಲ್ಲ ಎಂದರು.
ನಾವು ಕನ್ನಡಿಗರು ನಮ್ಮ ಮೈಯಲ್ಲಿ ಹರಿಯುತ್ತಿರುವುದು ಕನ್ನಡದ ರಕ್ತ ಧ್ವಜಸ್ತಂಬ ಕೆಡವಿದ ಮೀರ್ ಸಾಧಕರನ್ನು, ದುಷ್ಟ ಶಕ್ತಿಗಳನ್ನು ಸದೆ ಬಡಿದು ಅದೇ ಜಾಗದಲ್ಲಿ ಧ್ವಜಸ್ಥಂಭ ನಿರ್ಮಾಣ ಮಾಡಿ ಕನ್ನಡ ಧ್ವಜ ಹಾರಾಟ ಮಾಡುತ್ತೇವೆ. ಹಿಂದೂ ಮುಂದು ಯಾರು ಇಂತಹ ಕೃತ್ಯ ಎಸೆಗದಂತೆ ರಾಜ್ಯಾದ್ಯಂತ ಪ್ರಚಾರ ಪಡಿಸುತ್ತೇವೆ. 80ರ ದಶಕದಿಂದಲೂ ರಾಜ್ಯದಲ್ಲಿ ರೈತ ಸಂಘ ಬಲಿಷ್ಠವಾಗಿ ಬೆಳದಿದೆ. ರೈತ ಧ್ವಜ ಬೇರೆಯಲ್ಲ, ಕನ್ನಡದವಜ ಬೇರೆಯಲ್ಲ. ಈ ಹಿಂದೆ ಸಾಸ್ವೆ ಹಳ್ಳಿಯಲ್ಲಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ರೈತ ಸಂಘದ ನಾಮಫಲಕವನ್ನು ತೆಗೆದು ಹಾಕಲಾಗಿದೆ ನಾವು ಯಾವುದನ್ನು ಸಹಿಸುವುದಿಲ್ಲ ಅವಳಿ ತಾಲೂಕಿನಲ್ಲಿ ಪ್ರವಾಸ ಮಾಡಿ ಸಾವಿರಾರು ಕನ್ನಡಿಗರನ್ನು ಸೇರಿಸಿ ಅದೇ ಸ್ಥಳದಲ್ಲಿ ಕನ್ನಡದ ಧ್ವಜಾರೋಹಣ ನೆರವೇರಿಸುತ್ತೇವೆ ಎಂದರು.
ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಮರಳು ಸಿದ್ದಯ್ಯ ಮಾತನಾಡಿ ಕನ್ನಡ ಧ್ವಜಸ್ಥಂಭ ಯಾರೇ ಕೆಡವಿದರೂ ತಪ್ಪು. ಅವರಿಗೆ ಶಿಕ್ಷೆಯಾಗಬೇಕು ಅದೇ ಸ್ಥಳದಲ್ಲಿ ಧ್ವಜಸ್ತಂಬ ಸ್ಥಾಪನೆ ಆಗಲಿ ಬೇಕು ಎಂದರು.
ಪ್ರತಿಭಟನ ಸ್ಥಳದಲ್ಲಿ ತಾಲೂಕು ನಿಕಟಪೂರ್ವ ಜೆಡಿಎಸ್ ಅಭ್ಯರ್ಥಿ ಬಿಜಿ ಶಿವಮೂರ್ತಿ ಗೌಡ, ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನಾ ಕಾರ್ಯದರ್ಶಿ ಉಮೇಶ್ ಅವಳಿ ತಾಲೂಕಿನ ಅಧ್ಯಕ್ಷ ಬಸವರಾಜಪ್ಪ. ಕುಳಗಟ್ಟೆ ಚೆನ್ನಪ್ಪ ಗೋರಟ್ಟಿ ಮಂಜಪ್ಪ ಶಿವಕುಮಾರ್ ಶುಂಠಿ ಗಣೇಶಪ್ಪ ತಾಲೂಕು ಕರ್ನಾಟಕ ನಾಡು ರಕ್ಷಣಾ ವೇದಿಕೆ ಪದಾಧಿಕಾರಿಗಳು ನೂರಾರು ರೈತ ಮುಖಂಡರು ಉಪಸ್ಥಿತರಿದ್ದರು.