ಹುಣಸಘಟ್ಟ: ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಕೃಷಿ ಆಧಾರಿತ ಜೀವನಾಧಾರಗಳ ಕೇಂದ್ರ ಬಿಂದುಗಳು ಕೆರೆಗಳೆ ಹಾಗಿದ್ದು. ಇವು ಗ್ರಾಮ ಸಮುದಾಯದ ಆಸ್ತಿಗಳು ಎಂದು ಕೆಲಸನಕೆರೆ ಗ್ರಾಮದ ಹಿರಿಯ ನಾಗರಿಕ ಚನ್ನಬಸಪ್ಪ ಹೇಳಿದರು.
ಕ್ಯಾಸಿನಕೆರೆ ಗ್ರಾಮದ ಸರ್ವೆ ನಂ:85 ರಲ್ಲಿ ಇರುವ ಮೂರು ಎಕರೆ ಕೆರೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಮೃತ ಸರೋವರ ಯೋಜನೆಯಡಿ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿಯಡಿ ಕೆರೆಯನ್ನು ಅಭಿವೃದ್ಧಿಪಡಿಸಿ ಕೆರೆ ಅಂಗಳದಲ್ಲಿ ಗ್ರಾಮ ಪಂಚಾಯ್ತಿಯು ಆಯೋಜಿಸಿದ 74ನೇ ಗಣರಾಜ್ಯೋತ್ಸವದ ಧ್ವಜಾಹರಣವನ್ನು ನೆರವೇರಿಸಿ ಹಿರಿಯ ನಾಗರಿಕರ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಕೆರೆಗಳು ಅತ್ಯಂತ ಹಳೆಯದಾದ ಮಾನವ ನಿರ್ಮಿತ ರಚನೆ. ಕೆರೆಯ ಅಂಗಳ, ತೂಗು ಕೊಡಿ  ಕಾಲುವೆಗಳು ಅಚ್ಚು ಕಟ್ಟು ಮುಂತಾದ ಅನೇಕ ಅಂಗಗಳನ್ನು ಒಳಗೊಂಡ ಕೆರೆ ವ್ಯವಸ್ಥೆ ರೈತರಿಗೆ ಬಹು ಉಪಯೋಗಿ. ಮುಖ್ಯವಾಗಿ ಜಾನುವಾರುಗಳಿಗೆ ಕುಡಿಯುವ ನೀರು, ಅಂತರ್ಜಲಮಟ್ಟ ಕಾಪಾಡುವಿಕೆ, ಮೀನುಗಾರಿಕೆ, ಫಲವತ್ತಾದ ಹೂಳು ಮಣ್ಣು ಮುಂತಾದ ಹತ್ತು ಹಲವು ರೀತಿಯಲ್ಲಿ ಕೆರೆ ರೈತರಿಗೆ ಉಪಯೋಗವಾಗಿದೆ.

ಆದುದರಿಂದಲೇ ನಮ್ಮ ಪೂರ್ವಿಕರು ಕೆರೆಗಳ ನಿರ್ಮಾಣ ಮತ್ತು ನಿರ್ವಹಣೆಗೆ ಹೆಚ್ಚಿನ ಮಹತ್ವ ನೀಡಿದ್ದರೂ ಎಂದರು.
ಗಣರಾಜ್ಯೋತ್ಸವ ಆಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಪ್ರಬಂದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗ್ರಾ ಪಂ ಅಧ್ಯಕ್ಷ ಚಂದ್ರಪ್ಪನವರು ಬಹುಮಾನ ವಿತರಿಸಿ ಮಾತನಾಡಿದರು. ತಾಂತ್ರಿಕ ನಿರ್ವಹಣಾ  ಅಭಿಯಂತರ ಗಗನ್, ಪಿ ಡಿ ಓ ರಾಜಪ್ಪ, ಉಪಾಧ್ಯಕ್ಷ ಸುಜಾತಾ, ಗ್ರಾಪಂ ಸದಸ್ಯರುಗಳಾದ ಶಿವಮೂರ್ತಿ, ಕುಮಾರ್, ಮಂಜುನಾಥ, ಕಾವ್ಯ, ಯಶೋದಮ್ಮ, ಪವಿತ್ರ ಬಾಯಿ, ಶ್ರೀ ವೀರಭದ್ರೇಶ್ವರ ಪ್ರೌಢಶಾಲಾ ಶಿಕ್ಷಕರು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *