ನ್ಯಾಮತಿ :ತಾಲೂಕು ಸೂರಗೊಂಡನ ಕೊಪ್ಪದ ಬಾಯಿಗಡ್ ಶ್ರೀ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಿಯ ಮಹಾಮಡ್ ದೇವಸ್ಥಾನ ಆವರಣದಲ್ಲಿ 284ನೇ ಜಯಂತೋತ್ಸವ ಆಚರಣೆಯ ಮಾಡುವ ಹಿನ್ನೆಲೆಯಲ್ಲಿ ಮಾಜಿ ಮುಜರಾಯಿ ಸಚಿವ ರುದ್ರಪ್ಪ ಲಮಾಣಿಯವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಈ ಪೂರ್ವಭಾವಿ ಸಭೆಯಲ್ಲಿ ದೇವಸ್ಥಾನ ಸಮಿತಿ ಮತ್ತು ಸಮಾಜ ಹಿರಿಯ ಮುಖಂಡರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಜಯಂತೋತ್ಸವವನ್ನು ಆಚರಿಸಲು ಸಹ ತೀರ್ಮಾನಿಸಲಾಯಿತು .
ಮಾಜಿ ಸಚಿವರಾದ ರುದ್ರಪ್ಪ ಲಮಾಣಿಯವರು ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಬಣಜಾರ ಸಮಾಜದ ಎಲ್ಲಾ ಹಿರಿಯ ಮುಖಂಡರು ಮತ್ತು ಸರ್ವ ಸದಸ್ಯರುಗಳ ನೇತೃತ್ವದಲ್ಲಿ ತೆಗೆದುಕೊಂಡ ನಿರ್ಧಾರಗಳು ಫೆ.13 14 15ರಂದು ನಡೆಯುವ ಶ್ರೀ ಸಂತ ಸೇವಾಲಾಲ್ ಜನ್ಮದಿನ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರದ ರಾಜ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ಯವರನ್ನು ಮತ್ತು ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರನ್ನು ಹಾಗೂ ಹಾಲಿ ಸಚಿವರುಗಳು ಹಾಲಿ ಶಾಸಕರುಗಳು ಮತ್ತು ಮಾಜಿ ಸಚಿವರು ಮಾಜಿ ಶಾಸಕರುಗಳು ಹಾಗೂ ಸರ್ವ ಪಕ್ಷದ ಮುಖಂಡರುಗಳನ್ನು ಹವಾನಿಸಲು ಅಹವಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿಸಿದರು.
ಶ್ರೀ ಸಂತ ಸೇವಾಲಾಲ್ ಮಹಾಮಡ್ ಸಮಿತಿಯ ಅಧ್ಯಕ್ಷರಾದ ಡಾ ಎಲ್ ಈಶ್ವರ್ ನಾಯ್ಕ್ ಕಾರ್ಯಕ್ರಮದ ಕುರಿತು ಮಾತನಾಡಿ 13 14 15 ರಂದು ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮ ಮಾಹಿತಿಯನ್ನು ಈ ಕೆಳಗಿನ ಅಂಶದಲ್ಲಿ ತಿಳಿಸಿದರು.
ಫೆ.13 ಬೆಳಗ್ಗೆ 6 ಗಂಟೆಗೆ ಕಾಟಿ( ಧ್ವಜ) ಧ್ವಜಾರೋಹಣ ವಿವಿಧ ಬಣಜಾರ ಸಮಾಜದ ಗ್ರಾಮಸ್ಥರಿಂದ ನೆರವೇರಿಸಲಾಗುವುದು, ಅದರ ಜೊತೆಗೆ ಅದೇ ದಿನ ಬಣಜಾರ ಸಮುದಾಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಮಾಜದ ಸುಧಾರಕರಿಂದ ವಿಚಾರಗೋಷ್ಠಿ ಕಾರ್ಯಕ್ರಮವುವನ್ನು ಸಹ ನಡೆಸಲಾಗುವುದು ಎಂದರು.
ಫೆ 14ನೇ ತಾರೀಕಿನಂದು ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಮತ್ತು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಮಂತ್ರಿಮಂಡಲದ ಹಾಲಿ ಸಚಿವರು ಶಾಸಕರುಗಳು ಮಾಜಿ ಸಚಿವರು, ಮಾಜಿ ಶಾಸಕರುಗಳು ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 6 ಗಂಟೆಗೆ ಬಣಜಾರ ಸಮಾಜದ ಗುರುಗಳ ನೇತೃತ್ವದಲ್ಲಿ ಧಾರ್ಮಿಕ ಸಭೆಯನ್ನು ಸಹ ನಡೆಸಲಾಗುವುದು. ಅದರ ಜೊತೆಗೆ ರಾತ್ರಿ ಬಣಜಾರ ಸಮಾಜವನ್ನು ಬಿಂಬಿಸುವಂತಹ ವಿವಿಧ ಬಗೆಯ ಬಣಜಾರ ಸಾಂಸ್ಕೃತಿಕ ಕಾರ್ಯಕ್ರಮ ಸಹ ಜರುಗಲಿದೆ ಎಂದರು.
ಫೆ .15ನೇ ತಾರೀಕನಂದು ಬೆಳಗ್ಗೆ 9:30ಕ್ಕೆ ಸರಿಯಾಗಿ ಬೊಗ್ (ಹೋಮ) ಸಾರ್ವಜನಿಕ ಕಾರ್ಯಕ್ರಮದೊಂದಿಗೆ ಶ್ರೀ ಸಂತ ಸೇವಾಲಾಲ್ ಜನ್ಮದಿನ ಆಚರಣೆಯನ್ನು ಮಾಡಿ ಜಾತ್ರಾ ಮಹೋತ್ಸವದೊಂದಿಗೆ ಮೂರನೇ ದಿನದ ಕಾರ್ಯಕ್ರಮ ಮುಕ್ತಾಯಗೊಳ್ಳುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಂಡ ಅಭಿವೃದ್ಧಿ ನಿಗಮದ ನಿರ್ದೇಶಕರುಗಳು, ಪ್ರತಿಷ್ಠಾನದ ನಿರ್ದೇಶಕರುಗಳು ಮತ್ತು ಎಲ್ಲಾ ಸಲಾ ಸಮಿತಿಯ ಹಾಗೂ ದೇವಸ್ಥಾನ ಸಮಿತಿಯ ಸದಸ್ಯರುಗಳು ಸಮಾಜದ ಮುಖಂಡರುಗಳು ಸಹ ಉಪಸ್ಥಿತಿಯಲ್ಲಿದ್ದರು.

Leave a Reply

Your email address will not be published. Required fields are marked *