ಹೊನ್ನಾಳಿ ತಾಲೂಕಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕುಂದೂರು ಗುಡ್ಡ. ಮಾಸಡಿ ಪುರಸಭೆಯ ಕಸ ವಿಲೇವಾರಿಯ ಪಕ್ಕದಲ್ಲಿರುವ ಗುಡ್ಡ. ವಿಜಯಪುರ ತಾಂಡದಗುಡ್ಡ. ಬೆನಕನಹಳ್ಳಿಯ ಗುಡ್ಡ. ಅರಕೆರೆ ಕಾಲೋನಿಯ ಗುಡ್ಡ. ಹೀಗೆ ಅನೇಕ ಗುಡ್ಡಗಳಲ್ಲಿ ಕಲ್ಲು ಮತ್ತು ಮಣ್ಣು ಗಣಿಗಾರಿಕೆ ಮಾಡುತ್ತಿರು ಅಕ್ರಮ ದಂದೆಕೋರರು ಮತ್ತು ಗುತ್ತಿಗೆದಾರರ ಹಾಗೂ ಲೇಔಟ್ ನಿರ್ಮಾಣ ಮಾಡುವವರು ಮತ್ತು ರಸ್ತೆ ಕಂಟ್ರಾಕ್ಟರಗಳು ಸೇರಿಕೊಂಡು ಪ್ರಕೃತಿ ಸಂಪತ್ತಿನಿಂದ ಕೂಡಿರುವ ಗುಡ್ಡಗಳನ್ನು ಹಗೆದು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ಮತ್ತು ರಾಯಲ್ಟಿ ಕಟ್ಟದೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಅಭಯ ಹಸ್ತವಾಗಿ ನಿಂತಿರುವ ಅಧಿಕಾರಿಗಳ ವಿರುದ್ಧ ತಾಲೂಕು ದಂಡಾಧಿಕಾರಿಗಳ ಕಚೇರಿಯ ಮುಂದೆ ರತಿ ಪ್ರತಿಭಟಿಸಲಾಯಿತು ಎಂದು ಕರ್ನಾಟಕ ರಕ್ಷಣಾ ವೇದಿಕೆ ಹೊನ್ನಾಳಿ ತಾಲೂಕು ಘಟಕದ ಅಧ್ಯಕ್ಷ ವಿನಯ ಒಗ್ಗರ್ ತಿಳಿಸಿದರು .ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರು ರಾಜು ಕಣಗಣ್ಣರ. ಉಪಾಧ್ಯಕ್ಷ ಕೊಟ್ರೇಶ್. ಪ್ರಧಾನ ಕಾರ್ಯದರ್ಶಿ ಪ್ರವೀಣ್. ರಾಕೇಶ್. ರವಿ. ದಯಾನಂದ್. ನ್ಯಾಮತಿ ತಾಲೂಕು ಉಪಾಧ್ಯಕ್ಷ ನಾಗೇಶ್ ರೈತ ಸಂಘದ ಅಧ್ಯಕ್ಷ ಜಗದೀಶ್. ಉಪಸ್ಥಿತಿ ಇದ್ದರು.