ಹೊನ್ನಾಳಿ ಪುರಸಭೆಗೆ ನೂತನ ಅಧ್ಯಕ್ಷರಾಗಿ ಸುಮಾ ಮಂಜುನಾಥ್ ಇಂಚರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪುರಸಭೆಯ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಸುಮಾ ಒಬ್ಬರೇ ನಾಮಪತ್ರ ಅರ್ಜಿಯನ್ನು ಸಲ್ಲಿಸಿದ್ದು ಬೇರೆ ಯಾವ ಸದಸ್ಯರು ಕೂಡ ಅಧ್ಯಕ್ಷರ ಗಾದೆಗೆ ಅರ್ಜಿ ಸಲ್ಲಿಸದೆ ಇರುವ ಕಾರಣ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಸಿಲ್ದಾರ್ ತಿರುಪತಿ ಪಾಟೀಲ್ ಶ್ರೀಮತಿ ಸುಮಾ ಮಂಜುನಾಥರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಘೋಷಣೆ ಮಾಡಿದರು .ನೂತನ ಅಧ್ಯಕ್ಷರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ ಪಿ ರೇಣುಕಾಚಾರ್ಯ, ಪುರಸಭೆ ಉಪಾಧ್ಯಕ್ಷ ರಂಜಿತ ಚನ್ನಪ್ಪ ,ಮುಖ್ಯಾಧಿಕಾರಿ ಎಸ್ ಆರ್ ವೀರಭದ್ರಯ್ಯ ಹಾಗೂ ಪಟ್ಟಣ ಪಂಚಾಯತಿ ಸದಸ್ಯರುಗಳು ಸೇರಿದಂತೆ ಅಭಿನಂದಿಸಿದರು.