ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಫೆಬ್ರವರಿ ಮಾಹೆಯಲ್ಲಿ ಕ್ಷೇತ್ರ ಪ್ರವಾಸ ಕೈಗೊಳ್ಳಲಿದ್ದಾರೆ.
 ಫೆ. 03 ರ ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ಹೊನ್ನಾಳಿಯಿಂದ ಹೊರಟು  11 ಗಂಟೆಗೆ ಸುಂಕದಕಟ್ಟೆ ತಲುಪಿ ಶ್ರೀ ಮಂಜುನಾಥಸ್ವಾಮಿ, ಶ್ರೀ ನರಸಿಂಹ ಸ್ವಾಮಿ ದೇವಸ್ಥಾನಗಳ ರಾಜಗೋಪುರ ಕಳಸಾರೋಹಣ ಮತ್ತು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಅಲ್ಲಿಂದ ಹೊರಟು 12.30 ಗಂಟೆಗೆ ಮಾಚೇನಹಳ್ಳಿ ಗ್ರಾಮದಲ್ಲಿ ನಡೆಯುವ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದು.
ಮಾಚೇನಹಳ್ಳಿಯಿಂದ ಹೊರಟು ಮಧ್ಯಾಹ. 1.15 ಗಂಟೆಗೆ ರಾಂಪುರದ ಶ್ರೀ ಆಂಜನೇಯ ಸ್ವಾಮಿ, ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ, ಶೀ ಪದ್ಮಾವತಿ ಅಮ್ಮನವರ ಮತ್ತು ನವಗ್ರಹ ದೇವಸ್ಥಾನಗಳ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಧ್ಯಾಹ್ನ. 2 ಗಂಟೆಗೆ ರಾಂಪುರದಿಂದ ಹೊರಟು 2.45 ಕ್ಕೆ ದಾವಣಗೆರೆ ಆಗಮಿಸಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 4.30 ಗಂಟೆಗೆ ಹೊನ್ನಾಳಿ ತಲುಪಿ ಅಲ್ಲಿನ ಸಾರ್ವಜನಿಕರ ಕುಂದುಕೊರತೆಗಳ ಅಹ್ವಾಲುಗಳನ್ನು ಸ್ವೀಕರಿಸುವುದು ಮತ್ತು  ಹೊನ್ನಾಳಿಯಲ್ಲಿ ವಾಸ್ತವ್ಯ. ಹೂಡುವರು.
ಫೆ. 4 ರ ಶನಿವಾರ ಬೆಳಿಗ್ಗೆ. 10.30 ಗಂಟೆಗೆ ಹೊನ್ನಾಳಿಯಿಂದ ಹೊರಟು 11 ಕ್ಕೆ ನ್ಯಾಮತಿ ತಾಲ್ಲೂಕಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಾಂಸ್ಕøತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ದ್ವಿತಿಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ನ್ಯಾಮತಿಯಿಂದ ಹೊರಟು ಮಧ್ಯಾಹ್ನ. 12 ಗಂಟೆಗೆ ಬೇಲಿಮಲ್ಲೂರು ತಲುಪಿ ಅಲ್ಲಿನ ಧರ್ಮಸ್ಥಳ ಸಂಘ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಧ್ಯಾಹ್ನ 12.30 ಕ್ಕೆ ಕುಳಗಟ್ಟೆ ತಲುಪಿ ಶ್ರೀ ಆಂಜನೇಯ ಸ್ವಾಮಿ, ಲಕ್ಷ್ಮೀ ಮಹಾಕಾಳಿ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸುವುದು.
ಕುಳಗಟ್ಟೆಯಿಂದ ಹೊರಟು ಮಧ್ಯಾಹ್ನ. 3 ರಿಂದ 4 ಗಂಟೆಯವರೆಗೆ ನ್ಯಾಮತಿ ಮತ್ತು ಹೊನ್ನಾಳಿಯಲ್ಲಿ ಜರುಗುವ ಬೂತ್ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಜೆ. 6.30 ಗಂಟೆಗೆ ಹೊನ್ನಾಳಿಯಿಂದ ಹೊರಟು, ಸಂಜೆ. 7 ಗಂಟೆಗೆ ಮಲ್ಲಿಗೇನಹಳ್ಳಿ ತಲುಪಿ ಗ್ರಾಮದಲ್ಲಿ ನಡೆಯುವ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾತ್ರಿ. 8.30 ಗಂಟೆಗೆ ಅಲ್ಲಿಂದ ಹೊರಟು ಹೊನ್ನಾಳಿ ತಲುಪಿ ಅಲ್ಲಿಯೇ ವಾಸ್ಥವ್ಯ ಹೂಡುವರು.
ಫೆ. 5 ರ ಭಾನುವಾರ ಬೆಳಿಗ್ಗೆ. 10.30 ಗಂಟೆಗೆ ಹೊನ್ನಾಳಿಯಿಂದ ಹೊರಟು 11 ಗಂಟೆಗೆ ಸುರಹೊನ್ನೆ ತಲುಪಿ ಗ್ರಾಮದಲ್ಲಿ ನೇಕಾರರ ಸಮುದಾಯ ಭವನ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿದ ನಂತರ ಅಲ್ಲಿಂದ ಹೊರಟು ಮಧ್ಯಾಹ್ನ 12 ಗಂಟೆಗೆ ಯಕ್ಕನಹಳ್ಳಿ ತಲುಪಿ ಅಲ್ಲಿನ  ಮಾಯಾಂಬಿಕಾ ದೇವಸ್ಥಾನ ಆವರಣದ ಶ್ರೀ ಮಾಯಾಂಬಿಕಾದೇವಿ ಅಡ್ಡಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ,
ಯಕ್ಕನಹಳ್ಳಿಯಿಂದ ಹೊರಟು ಮಧ್ಯಾಹ್ನ. 1 ಗಂಟೆಗೆ ಚಿಕ್ಕಹಾಲಿವಾಣ ತಲುಪಿ, ಗ್ರಾಮದ ಶ್ರೀ ವೀರಭದ್ರಸ್ವಾಮಿ ದೇವರ ಗುಗ್ಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಧ್ಯಾಹ್ನ 2 ಗಂಟೆಗೆ ಹೊನ್ನಾಳಿಗೆ ಪ್ರಯಾಣ ಬೆಳೆಸಿ  ಸಾರ್ವಜನಿಕರ ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿದ ನಂತರ ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *