ನ್ಯಾಮತಿ :ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇತೃತ್ವದಲ್ಲಿ ಸಾಮಾನ್ಯ ಸಭೆ ಕರೆಯಲಾಗಿತ್ತು.
ಉಪಾಧ್ಯಕ್ಷ ಪ್ರಕಾಶ್ ನಾಯ್ಕ ಸಭೆ ಕುರಿತು ಮಾತನಾಡಿದ ಅವರು ಈ ಹಿಂದೆ ಸುಮಾರು ಬಾರಿ ಮುಸೇನಾಳ್ ಗ್ರಾಮಕ್ಕೆ ಸಂಬಂಧಪಟ್ಟ ಸರ್ವೆ ನಂಬರ್ 37 38 39ರ ದಾಖಲೆಯು ತಾಲೂಕ ನಿರ್ವಣಾಧಿಕಾರಿ ಹೆಸರಿನಲ್ಲಿದ್ದು, ನಮ್ಮ ಗ್ರಾಮಕ್ಕೆ ಸೇರಿದ ಈ ಸರ್ವೇ ನಂಬರ್ ಗಳನ್ನ ಕೂಡಲೇ ಫಲವನಹಳ್ಳಿ ಗ್ರಾಮ ಪಂಚಾಯಿತಿಗೆ ಹೆಸರಿಗೆ ಸೇರಿಸಿ ವರ್ಗಾಯಿಸಿ ಮುಸ್ಸೇನಾಳ ಗ್ರಾಮಠಾಣಾ ಗ್ರಾಮ ಮಾಡಬೇಕೆಂದು ಈ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಂಡು ಠರಾವು ಹೊರಡಿಸಿ ತಾಲೂಕ್ ನಿರ್ವಹಣಾಧಿಕಾರಿಗೆ ಪತ್ರವನ್ನು ಬರೆಯಲಾಯಿತು ಎಂದು ತಿಳಿಸಿ, ಎನ್ ಆರ್ ಐ ಜಿ ಮತ್ತು ಬಿ ಎಫ್ ಟಿ ಮತ್ತು ತಾಂತ್ರಿಕ ಸಿಬ್ಬಂದಿಗಳು ಪಲವನಹಳ್ಳಿಗ್ರಾಮ ಪಂಚಾಯಿತಿಗೆ ಬಂದು ಕಾರ್ಯನಿರ್ವಹಿಸುತ್ತಿಲ್ಲ ಈ ಅಧಿಕಾರಿಗಳ ವಿಳಂಬ ಧೋರಣೆಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿಯನ್ನು ಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲ ಆದ್ದರಿಂದ ಮುಸ್ಸೇನಾಳ ಗ್ರಾಮಠಾಣವಾಗಿ ಪರಿವರ್ತಿಸಿ ಗ್ರಾಮಸ್ಥರಿಗೆ ಈ ಸ್ವತ್ತು ಸಿಗುವಂತಾಗಬೇಕು ಸಿಕ್ಕಾಗ ಮಾತ್ರ ಗ್ರಾಮ ಅಭಿವೃದ್ಧಿ ಆಗಲಿಕ್ಕೆ ಸಾಧ್ಯಎಂದು ಸಭೆಯಲ್ಲಿ ನಿರ್ಣಯವನ್ನು ತೆಗೆದುಕೊಂಡು ತಾಲೂಕು ನಿರ್ವಾಣ ಅಧಿಕಾರಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿ, ನಮ್ಮ ಫಲವನಹಳ್ಳಿ ಗ್ರಾಮ ಪಂಚಾಯತಿಯನ್ನು ಅಭಿವೃದ್ಧಿಪಥದಲ್ಲಿ ತೆಗೆದುಕೊಂಡು ಹೋಗಬೇಕಾದರೆ ತಾಲೂಕು ಮಟ್ಟದ ಅಧಿಕಾರಿಗಳು ಪಲವನಹಳ್ಳಿ ಗ್ರಾಮ ಪಂಚಾಯಿತಿಗೆ ಮುಖ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಶ್ರೀ ಬೈರಪ್ಪ ,ಉಪಾಧ್ಯಕ್ಷರಾದ ಪ್ರಕಾಶ್ ನಾಯ್ಕ ಮುಸೇನಾಳ್, ಸದಸ್ಯರುಗಳಾದ ನಟರಾಜಪ್ಪ, ಗೋವಿಂದರಾಜ್ ,ಪ್ರವೀಣ್ ಪಿ ಆರ್, ನಾಗೇಶ್ ನಾಯ್ಕ, ನೇತ್ರಮ್ಮ ಸಹ ಪಾಲ್ಗೊಂಡಿದ್ದರು.