ನ್ಯಾಮತಿ ;ತಾಲೂಕು ಕುಂಕುವ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ 533 ನೇ “ನಮ್ಮೂರು ನಮ್ಮ ಕೆರೆ” ಹೂಳೆತ್ತುವ ಕಾರ್ಯಕ್ರಮಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ತಾಲೂಕು ಯೋಜನಾಧಿಕಾರಿ ಬಸವರಾಜ್ ಅಂಗಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಈ ಯೋಜನೆಯಡಿಯಲ್ಲಿ ಅನುಷ್ಠಾನ ಮಾಡುತ್ತಿರುವ ಅನೇಕ ಸಮುದಾಯಗಳ ಅಭಿವೃದ್ಧಿ , ದೇವಸ್ಥಾನ ಜೀರ್ಣೋದ್ದಾರ, ಜನಮಂಗಳ ಕಾರ್ಯಕ್ರಮ ಹಾಗೂ ಕೆರೆ ಹೂಳು ತೆಗೆಯುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ, ನಿರಂತರವಾಗಿ ಕೆರೆಯಲ್ಲಿ ಶುದ್ಧವಾದ ಕುಡಿಯುವನೀರು ಜನರಿಗೆ ಮತ್ತು ಜಾನುವಾರುಗಳಿಗೆ ಸಿಗುತ್ತದೆ. ಅದರ ಜೊತೆಗೆ ಹೊಲದಲ್ಲಿ ಕೊರಿಸಿದ ಬೋರು ಸಹ ಜಲಧಾರೆ ಹೆಚ್ಚಾಗಿ ರೈತರ ಬದುಕು ಹಸನಾಗುತ್ತದೆ ಎಂದರು.
ಕೆರೆ ಸಮಿತಿ ಅಧ್ಯಕ್ಷ ಮೋಹನ್ ಮಾತನಾಡಿ ಧರ್ಮಸ್ಥಳದ ಪೂಜ್ಯರು ಮಾಡುತ್ತಿರುವ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಸಮಿತಿ ಉಪಾಧ್ಯಕ್ಷರು ಸುನಿಲ್, ಕೋಶಾಧಿಕಾರಿ,ಕುಮಾರ್, ಒಕ್ಕೂಟ ಅಧ್ಯಕ್ಷರು ಸೋಮಣ್ಣ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಸವರಾಜ್, ರುದ್ರಯ್ಯ,ಜಿಲ್ಲಾ ಜನಜಾಗೃತಿ ಸದಸ್ಯ ರುದ್ರೇಶಪ್ಪ, ವಲಯ ಮೇಲ್ವಿಚಾರಕ ಪ್ರಕಾಶ್, ಸೇವಾಪ್ರತಿನಿಧಿ ಗೀತಾ, ಶಿಲ್ಪಾ, ಚೈತ್ರ ಹಾಗೂ ಊರಿನ ಎಲ್ಲಾ ಗ್ರಾಮಸ್ಥರು, ಮಹಿಳೆಯರು, ಯುವಕರು ಯೋಜನೆಯ ಕೃಷಿ ಅಧಿಕಾರಿ ಪ್ರೇಮ್ ಕುಮಾರ್, ಇನ್ನು ಮುಂತಾದವರು ಪಾಲ್ಗೊಂಡಿದ್ದರು.