ಸವಳಂಗ(ನ್ಯಾಮತಿ):
ನ್ಯಾಮತಿ ತಾಲ್ಲೂಕಿನ ಕೆರೆಗಳನ್ನು ತುಂಬಸುವ ಯೋಜನೆಗೆ 519 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇನ್ನೆರೆಡು ತಿಂಗಳಲ್ಲಿ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಯುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲ್ಲೂಕಿನ ಸವಳಂಗ ಗ್ರಾಮದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಕಾರ್ಯಕ್ರಮದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
17 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಗ್ರಾಮ ವಾಸ್ತವ್ಯ ಕಾರ್ಯಕ್ರಮಗಳು ನಡೆದಿದ್ದು, ಅವುಗಳಲ್ಲಿ ಕೊನೆಯಕಾರ್ಯಕ್ರಮ ಸವಳಂಗ ಗ್ರಾಮದಲ್ಲಿ ಸಮಾರೋಪಕಾರ್ಯಕ್ರಮ ಇದಾಗಿದೆ. ಸರ್ಕಾರದ ಸೌಲಭ್ಯ ಪಡೆಯಲು ಕಚೇರಿಗಳಿಗೆ ಅಲೆದಾಡುವುದು ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಗ್ರಾಮ ವಾಸ್ತವ್ಯಕಾರ್ಯಕ್ರಮವಾಗಿದ್ದು, ಜನತೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ, ಅವಳಿ ತಾಲ್ಲೂಕಿನ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಕಾಂಗ್ರೇಸ್ ಪಕ್ಷದವರು 10 ಕೆಜಿ ಅಕ್ಕಿ, ಮಹಿಳೆಯರಿಗೆ ರೂ 2 ಸಾವಿರ ವೇತನ ನೀಡುತ್ತೇವೆಎಂಬುದು ಚುನಾವಣಗಿಮಿಕ್, ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಆರ್ಥಿಕವಾಗಿ ಸದೃಡಗೊಳಿಸಿದ್ದು, ಉಚಿತವಾಗಿ ಕೋವಿಡ್ ಲಸಿಕೆ ವಿತರಣೆ, ಮೇಕ್‍ಇನ್‍ಇಂಡಿಯಾ ಮೂಲಕ ಭಾರತವನ್ನುಉನ್ನತ ಮಟ್ಟಕ್ಕೆತೆಗೆದುಕೊಂಡಿದ್ದಾರೆಎಂದರು.
ಕೋವಿಡ್ ಸಮಯದಲ್ಲಿ ಅವಳಿ ತಾಲ್ಲೂಕಿನ ಜನತೆಗೆ ಸೇವೆ ಸಲ್ಲಿಸಿದ್ದು, ನಾನು ಕೋವಿಡ್ ಹಣವನ್ನು ಹೊಡೆದಿದ್ದೇನೆ ಎಂದು ಅಪಾದನೆ ಮಾಡಿದರು.ಆದರೆ ಆ ಸಮಯದಲ್ಲಿ ಜೀವದ ಹಂಗು ತೊರೆದು ಮನ:ಪೂರ್ವಕವಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಸ್ಮರಿಸಿಕೊಂಡರು. ಸವಳಂಗ ಸುತ್ತಮುತ್ತಲ ಗ್ರಾಮಗಳಿಗೆ ಶುದ್ದಕುಡಿಯವ ನೀರು ಒದಗಿಸಲು 83 ಕೋಟಿ, ನ್ಯಾಮತಿ ಪಟ್ಟಣಕ್ಕೆ 74 ಕೋಟಿ ಅನುದಾನ ನೀಡಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷಗಿರೀಶಪಟೇಲ, ಸದಸ್ಯರಾದ ಲಲಿತಮ್ಮ, ಬಸವರಾಜಪ್ಪ, ರತ್ನಮ್ಮ, ನಿಂಗಮ್ಮ, ನಾಗರಾಜನಾಯ್ಕ, ನೀಲಾಬಾಯಿ, ಗಾಯಿತ್ರಿ, ರಾಜಪ್ಪ, ರುಕ್ಮೀಣಿಬಾಯಿ, ಬಗರ್‍ಹುಕುಂ ಸಮಿತಿ ಅಧ್ಯಕ್ಷ ವೀರಣ್ಣಗೌಡ, ಸದಸ್ಯರಾದ ಮಲ್ಲೇಶಣ್ಣ, ಶಿಕ್ಷಣ ಇಲಾಖೆಯ ಮುದ್ದನಗೌಡರು, ಸಂಜೀವಿನಿ ಒಕ್ಕೂಟದ ಭಾಗ್ಯಮ್ಮ, ಭಾರತಿ ಉಪಸ್ಥಿತರಿದ್ದರು.
ತಾಲ್ಲೂಕು ಪಂಚಾಯಿತಿ ಇಒ ರಾಮಭೋವಿ ಸ್ವಾಗತಿಸಿದರು, ತಹಶೀಲ್ದಾರ್ ಬಿ.ವಿ.ಗಿರೀಶಬಾಬು ಪ್ರಾಸ್ತಾವಿಕ ಮಾತನಾಡಿದರು.ಪಿಡಿಒ ಟಿ. ಸುರೇಶ ನಿರೂಪಿಸಿದರು.