ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ 16 ರಿಂದ 45 ವರ್ಷ ವಯೋಮಿತಿಯ ಪ.ಜಾ/ಪ.ಪಂ ದ ಅಭ್ಯರ್ಥಿಗಳಿಂದ ವಿವಿಧ ಕೋರ್ಸುಗಳ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯನ್ನು ಹೊಂದಿದ್ದು ಮಾರ್ಚ್ 25 ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಶಿಷ್ಯವೇತನ ನೀಡಲಾಗುವುದು.
ಕೋರ್ಸುಗಳು : ಆಟೋಮೇಷನ್ ಅಂಡ್ ಕಂಟ್ರೋಲ್, ಇಂಟರ್ನೆಟ್ ಆಫ್ ಥಿಂಗ್, ರಿವರ್ಸ್ ಇಂಜಿನಿಯರಿಂಗ್, 3ಡಿ ಪ್ರಿಂಟಿಂಗ್, ವ್ಯಾಲಿಡೇóನ್ ಲ್ಯಾಬ್, ಸಿ.ಎನ್.ಸಿ ಮ್ಯಾನ್ಯುಫ್ಯಾಕ್ಚರಿಂಗ್, ಅಂಡ್ ಮóಷಿನಿಂಗ್, ರಿಯಾಲಿಟಿ ಲ್ಯಾಬ್, ಪ್ರೊಡಕ್ಟ ಡಿಸೈನ್ ಅಂಡ್ ಡೆವೊಲೆಪ್ಮೆಂಟ್, ಸಿ.ಎನ್.ಸಿ ಆಪರೇಟರ್ ಟರ್ನಿಂಗ್, ಸಿ.ಎನ್.ಸಿ ಪ್ರೋಗ್ರಾಮರ್, ಸಿ.ಎನ್.ಸಿ ಮಿಲ್ಲಿಂಗ್ ಮಷಿನ್ ಆಪರೇಟರ್, ಸಿ.ಎನ್.ಸಿ ಪ್ರೋಗ್ರಾಮಿಂಗ್ ಮತ್ತು ಆಪರೇóನ್, ಟರ್ನರ್, ಮಿಲ್ಲರ್, ಗ್ರೈಡರ್, ಡಿಸೈನರ್- ಮೆಕಾನಿಕಲ್, ಪ್ರೊಡಕ್ಷನ್ ಇಂಜಿನಿಯರ್, ಟೂಲ್ ರೂಮ್ ಮಷಿನಿಸ್ಟ್ ಕೊರ್ಸುಗಳಿಗೆ ತರಬೇತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಹರಿಹರ ತಾಲ್ಲೂಕಿನ ಹರ್ಲಾಪುರ ಇಂಡಸ್ತ್ರಿಯಲ್ ಏರಿಯಾದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರು ಹಾಗೂ ಮೊ. ನಂ-9035372971, 9066583066, 9164369670 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.