ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಆಚರಣೆ ನಿಮಿತ್ತ ಮಾರ್ಚ್ 07 ರಂದು ಕಾಮದಹನ ಮಾರ್ಚ್ 08 ರಂದು ಹೋಳಿ ಹಬ್ಬ ಮತ್ತು ಮುಸ್ಲಿಂ ಸಮಾಜದವರು ಷಬ್-ಎ-ಬರಾತ್ ಆಚರಣೆ ಹಮ್ಮಿಕೊಳ್ಳಲಾಗಿದ್ದು,  ಎರಡು ದಿವಸ  ಜಿಲ್ಲೆಯಾದ್ಯಂತ ಮದ್ಯಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಶಿವಾನಂದ ಕಾಪಶಿ  ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯು ಮತೀಯ ದೃಷ್ಠಿಯಿಂದ ಅತೀ ಸೂಕ್ಷ್ಮ ಜಿಲ್ಲೆಯಾಗಿರುವ ಹಿನ್ನಲೆ ಈ ಹಬ್ಬದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮುಂಜಾಗ್ರತಾ ದೃಷ್ಠಿಯಿಂದ ಮಾರ್ಚ್ 07 ರಂದು ಸಂಜೆ 05 ಗಂಟೆಯಿಂದ ಮಾರ್ಚ್ 08ರ ಸಂಜೆ 05 ಗಂಟೆಯವರೆಗೆ ದಾವಣಗೆರೆ ಜಿಲ್ಲೆಯಾದ್ಯಂತ ಮದ್ಯಮಾರಾಟ ಮದ್ಯ ಸರಬರಾಜನ್ನು ನಿಷೇಧಿಸಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *