ಸಾಸ್ವೆಹಳ್ಳಿ: ಇಂದಿನ ಮಹಿಳೆಯರು ಹಲವು
ಕಾರ್ಯಗಳ ನಡುವೆಯೂ ತಮ್ಮದೆ ಆದ
ಕಾರ್ಯಗಳ ಮೂಲಕ ಸಮಾಜಕ್ಕೆ
ಕೊಡುಗೆಯನ್ನು ನೀಡಿದ್ದಾರೆ. ಅಂತಹ
ಮಹಿಳೆಯನ್ನು ಗೌರವಿಸುವುದು ನಮ್ಮ ಧರ್ಮ
ಎಂದು ಸಾಸ್ವೆಹಳ್ಳಿಯ ವೈದ್ಯೆ ನೇತ್ರಾವತಿ ಹೇಳಿದರು.
ಸಮೀಪದ ಹನಗವಾಡಿಯಲ್ಲಿ ನಡೆದ ಮಹಿಳಾ
ದಿನಾಚರಣೆಯಲ್ಲಿ ಗೃಹಿಣಿ ಕುಸಮಾ ಅವರನ್ನು
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ
ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು.
ಗೃಹಿಣಿಯರು ಹಲವು ಜವಾಬ್ದಾರಿಗಳನ್ನು
ಹೊತ್ತಿರುತ್ತಿರುತ್ತಾರೆ. ಅಂತಹ ಮಹಿಳೆಯರನ್ನು
ಗೌರವಿಸಿದ್ದು ಸಂತೋಷ ತಂದಿದೆ. ಇಂದು
ಮಹಿಳೆಯರು ಬಿಸಿಲಿಗೆ ಬರದೆ ಹಲವು ಕಾಯಿಲೆಗಳಿಗೆ
ತುತ್ತಾಗುತ್ತಿದ್ದಾರೆ. ದಿನದ ಕೆಲವು ಸಮಯ
ಅದರಲ್ಲೂ ಬೆಳಗಿನ ಬಿಸಲಲ್ಲಿ ಇರುವುದರಿಂದ ದೇಹಕ್ಕೆ
ಅಗತ್ಯ ಡಿ ಜಿವಸತ್ವ ದೊರೆಯುತ್ತದೆ.
ಮಹಿಳೆಯರು ಆರೋಗ್ಯದ ಕಡೆ ಹೆಚ್ಚು ಗಮನ
ನೀಡಬೇಕು ಎಂದರು.
ಹೋಬಳಿಯ ಹನುಮನಹಳ್ಳಿ, ಹುರಳಹಳ್ಳಿ
ಗ್ರಾಮದಲ್ಲಿ ಮಹಿಳಾ ದಿನಾಚರಣೆಯನ್ನು ಸಂಘದ
ವತಿಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ಗಿರೀಶ್ ಎನ್,
ಸೇವಾ ಪ್ರತಿನಿಧಿಗಳಾದ ಮಂಜಪ್ಪ, ಗಂಗಮ್ಮ,
ರಾಜೇಶ್ವರಿ, ವಿ.ಎಲ್.ಇ ಯತೀಶ್ವರಿ, ಸಂಘದ ಸದಸ್ಯರಾದ
ರೂಪ, ಸುಮಿತ್ರ, ಸುಶೀಲ ಇದ್ದರು.