ನ್ಯಾಮತಿ: ತಾಲೂಕಿನ ಒಡೆರತ್ತೂರು ವಲಯದ ಬಸವನಹಳ್ಳಿ ಗ್ರಾಮದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಹೊಲಿಗೆ ತರಬೇತಿ ಸಮಾರೋಪ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ್. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹೆಣ್ಣುಮಕ್ಕಳಿಗೆ ಗೌರವ ಕೊಡುವ ದೇಶ ಯಾವುದಾದರು ಇದ್ದರೆ ಅದು ಭಾರತ ದೇಶ. ಅದರಲ್ಲೂ ಹೆಣ್ಣು ಮಕ್ಕಳಿಗೆ ಬಹಳ ಪ್ರಾಧಾನ್ಯತೆ ನೀಡಿದೆ . ಮಕ್ಕಳಿಗೆ ಮೊಬೈಲ್ ಬಳಕೆಯ ಅತಿ ಹೆಚ್ಚಾಗುತ್ತಿದ್ದು ತಾಯಂದಿರು ಇದರ ಬಗ್ಗೆ ಗಮನ ಹರಿಸಬೇಕು. ಇದರ ಜೊತೆಗೆಆತ್ಮಸ್ಥೈರ್ಯವನ್ನು ಹೆಣ್ಣು ಮಕ್ಕಳು ಉಳಿಸಿಕೊಂಡು ಸ್ವಾವಲಂಬನೆ ಬದುಕು ನಡೆಸಬೇಕಾದರೆ ಕೆಲಸಕ್ಕೆ ಮೊರೆಹೋಗುವುದು ಅವಶ್ಯಕ. ಅವುಗಳಲ್ಲಿ ಸುಲಭ ಉದ್ಯೋಗ ಅಂದರೆ ಟೈಲರಿಂಗ್ ಇಂದಿನ ಆಧುನಿಕ ಫ್ಯಾಶನ್ ಯುಗದಲ್ಲಿ ಟೈಲರಿಂಗ್ ಉದ್ಯೋಗ ಮಾಡುವುದರಿಂದ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ ಎಂದರು. ಹೊಲಿಗೆ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ 40 ಜನ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.ಮತ್ತು ಯೋಜನೆಯಿಂದ ಪ್ರಗತಿನಿಧಿ ಸಾಲ ಪಡೆದು ಟೈಲರಿಂಗ್ ಮಷೀನ್ ಖರೀದಿ ಮಾಡಿದ ಸದಸ್ಯರಿಗೆ ಟೈಲರಿಂಗ್ ಮಿಷನ್ ಉಡ ಹಸ್ತಾಂತರಿಸಿದರು . ತಾಲೂಕಿನ ಯೋಜನಾಧಿಕಾರಿ ಬಸವರಾಜ್ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ರಮೇಶ್. ಹಾಗೂ ಸದಸ್ಯರಾದ ಹರೀಶ್ .ಒಕ್ಕೂಟದ ಅಧ್ಯಕ್ಷರಾದ ಹಾಲಮ್ಮ. ಉಪಾಧ್ಯಕ್ಷರಾದ ಗೌರಮ್ಮ. ಕಾರ್ಯದರ್ಶಿ ವಾಣಿ .ಮೇಲ್ವಿಚಾರಕರಾದ ಪ್ರಕಾಶ್, ಜ್ಞಾನವಿಕಾಸ ಸಮನ್ವಯಧಿಕಾರಿಯಾದ ಜಯಶ್ರೀ. ಸೇವಾ ಪ್ರತಿನಿಧಿ ಕವಿತಾ. ಚಂದ್ರಕಲಾ. ರೇಖಾ. ದರ್ಶನ್. ಗಾನವಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರು. ಸಂಘದ ಪಾಲುದಾರು ಸದಸ್ಯರು ಸಹ ಉಪಸ್ಥಿತಿಯಲ್ಲಿದ್ದರು.

Leave a Reply

Your email address will not be published. Required fields are marked *