ಹೊನ್ನಾಳಿ : ಆಕಸ್ಮಿಕ ಅಗ್ನಿ ಅವಘಡದಿಂದ ಮನೆ ಕಳೆದುಕೊಂಡ ಮೂರು ಕುಟುಂಬಗಳಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವೈಯಕ್ತಿಕವಾಗಿ ತಲಾ ಹತ್ತು ಸಾವಿರ ಧನ ಸಹಾಯ ಹಾಗೂ ಮೂರು ಕುಟುಂಬಸ್ಥರಿಗೆ ಧವಸ-ಧಾನ್ಯ, ಬಟ್ಟೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಶನಿವಾರ ತಡರಾತ್ರಿ ತಾಲೂಕಿನ ಮಾಸಡಿ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಮೂರು ಮನೆಗಳು ಸುಟ್ಟುಹೋಗಿದ್ದು ಮನೆಯಲ್ಲಿದ್ದ ಪಾತ್ರೆ-ಪಗಡಗಳು, ಜಾನುವಾರುವೊಂದು ಸಾವನ್ನಪ್ಪಿತ್ತು.
ವಿಷಯ ತಿಳಿಯುತ್ತಿದ್ದಂತೆ ರಾತ್ರೋರಾತ್ರಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು, ಮೂರು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ, ವೈಯಕ್ತಿಕ ತಲಾ ಹತ್ತು ಸಾವಿರ ಸಹಾಯ ಮಾಡಿ ಪರಿಹಾರ ಕೊಡಿಸುವುದಾಗಿ ಬರವಸೆ ನೀಡಿದರು.
ಅಷ್ಟೇ ಅಲ್ಲದೇ ಬೆಳ್ಳಗ್ಗೆ ಹೊನ್ನಾಳಿ ನಿವಾಸಕ್ಕೆ ಬಂದರೆ ದವಸ ಧಾನ್ಯ, ಬಟ್ಟೆ ಕೊಡಿಸುವುದಾಗಿ ಹೇಳಿ ಬಂದಿದ್ದರು. ಅದರಂತೆ ಇಂದು ಮುಂಜಾನೆ ಚಂದ್ರಮ್ಮ-ರಾಜಪ್ಪ, ಗಂಗಮ್ಮ-ಹಾಲಪ್ಪ, ಶಿವಮ್ಮ-ಪರಸಪ್ಪ ಕುಟುಂಬಸ್ಥರಿಗೆ ಅಗತ್ಯ ಸಾಮಾಗ್ರಿಗಳನ್ನು ಕೊಡಿಸುವುದರ ಜೊತೆಗೆ ನಿಮ್ಮೊಂದಿಗೆ ನಾನಿದ್ದೇನೆಂದು ಆತ್ಮಸ್ಥೈರ್ಯ ಹೇಳಿದರು.
ಈ ವೇಳೆ ಗ್ರಾಮಸ್ಥರಾದ ಮಾಜಿ ಗ್ರಾ.ಪಂ ಅಧ್ಯಕ್ಷ ಅಶೋಕ್ ಗ್ರಾಮಸ್ಥರಾದ ಹನುಮಂತಪ್ಪ,ಸೇರಿದಂತೆ ಮತ್ತೀತರರಿದ್ದರು.