ಮಾನ್ಯ
ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಮಾರ್ಚ್ 17ರ
ಇಂದು ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲ್ಲೂಕಿನ ಅಂದಾಜು
1933 ಕೋಟಿ ಮೊತ್ತದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ
ಉದ್ಘಾಟನೆ ಹಾಗೂ ಭೂಮಿಪೂಜೆ ನೆರೇವೆರಿಸಿ ವಿವಿಧ
ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ
ಸೌಲಭ್ಯಗಳನ್ನು ವಿತರಿಸಲಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ,ತಾಲ್ಲೂಕು ಆಡಳಿತ,
ತಾಲ್ಲೂಕು ಪಂಚಾಯತ್ ಹೊನ್ನಾಳಿ ಮತ್ತು ನ್ಯಾಮತಿ
ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಧ್ಯಾಹ್ನ
2.30 ಗಂಟೆಗೆ ಹೊನ್ನಾಳಿಯ ಖಾಸಗಿ ಬಸ್ ನಿಲ್ದಾಣ ಹತ್ತಿರ ಪಟ್ಟಣ
ಶೆಟ್ಟಿ ಲೇಔಟ್‍ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ
ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಯಿ
ಕಾರ್ಯಕ್ರಮದ ಶಂಕುಸ್ಥಾಪನೆ ಹಾಗೂ ಉದ್ಘಾಟನೆ

ನೆರೇವೇರಿಸುವರು. ಮುಖ್ಯ ಮಂತ್ರಿಗಳ ರಾಜಕೀಯ
ಕಾರ್ಯದರ್ಶಿ ಹಾಗೂ ಹೊನ್ನಾಳಿ ವಿಧಾನಸಭಾ ಕ್ಷೇತ್ರ
ಶಾಸಕರಾದ ಎಂ ಪಿ ರೇಣುಕಾಚಾರ್ಯ ಅಧ್ಯಕ್ಷತೆ
ವಹಿಸುವರು.
ನಿಕಟ ಪೂರ್ವ ಮುಖ್ಯ ಮಂತ್ರಿಗಳಾದ ಬಿ.ಎಸ್
ಯಡಿಯೂರಪ್ಪ, ನಗರಾಭಿವೃದ್ದಿ ಸಚಿವರು ಹಾಗೂ
ದಾವಣಗೆರೆ ಹಾಗೂ ಮತ್ತು ಚಿಕ್ಕಮಗಳೂರು ಜಿಲ್ಲಾ
ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜ(ಬೈರತಿ), ಜಲಸಂಪನ್ಮೂಲ
ಸಚಿವ ಗೊವಿಂದ ಎಂ ಕಾರಜೋಳ, ಸಂಸದ ಜಿ.ಎಂ ಸಿದ್ದೇಶ್ವರ
ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ಸಚಿವರುಗಳಾದ ಆರ್.ಅಶೋಕ್,
ಬಿ.ಶ್ರೀರಾಮುಲು, ವಿ.ಸೋಮಣ್ಣ, ಜೆ.ಸಿ ಮಾಧುಸ್ವಾಮಿ, ಡಾ.ಅಶ್ವಥ್
ನಾರಾಯಣ, ಸಿ.ಸಿ.ಪಾಟೀಲ್ ಆನಂದ್ ಸಿಂಗ್, ಕೋಟಾಶ್ರೀವಾಸ್ ಪೂಜಾರಿ,
ಪ್ರಭುಚವ್ಹಾಣ್, ಅರೇಬೈಲ್ ಶಿವರಾಮ್ ಹೆಬ್ಬಾರ್, ಬಿ.ಸಿ ಪಾಟೀಲ್,
ಡಾ.ಕೆ.ಸುಧಾಕರ್, ಸುನೀಲ್ ಕುಮಾರ್.ವಿ, ಆಚಾರ್ ಹಾಲಪ್ಪ ಬಸಪ್ಪ,
ಮುನಿರತ್ನ, ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ದಿ
ಮಂಡಳಿಯ ಅಧ್ಯಕ್ಷರಾದ ಮಹೇಶ್ ಕುಮಠಳ್ಳಿ
ಭಾಗವಹಿಸಲಿದ್ದಾರೆ.
ಶಾಸಕರಾದ ಆಯನೂರು ಮಂಜುನಾಥ್, ಎಸ್ ಎಲ್
ಭೋಜೆಗೌಡ, ಡಿ.ಎಸ್ ಅರುಣ್, ಹೊನ್ನಾಳಿ ಪುರಸಭೆಯ
ಅಧ್ಯಕ್ಷರಾದ ಸುಮ ಮಂಜುನಾಥ ಇಂಚರ ಹಾಗೂ ಸ್ಥಳೀಯ

ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *