ಬಳ್ಳಾರಿ ಜಿಲ್ಲೆಯ ಅಸುಂಡಿಯಲ್ಲಿ ಮಾರ್ಚ್ 18 ಮತ್ತು 19 ರಂದು ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಖೋ-ಖೋ ಪಂದ್ಯಾವಳಿಯಲ್ಲಿ ಜಿಲ್ಲೆಯ ಕ್ರೀಡಾ ವಸತಿ ನಿಲಯದ ಖೋ-ಖೋ ಪುರುಷರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆ, ಬೆಂಗಳೂರು ಮತ್ತು ಬಳ್ಳಾರಿ ಜಿಲ್ಲಾ ಖೋ-ಖೋ ಸಂಸ್ಥೆ ಹಾಗೂ ಅಸುಂಡಿ ಯುವಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಪುರುಷರ ಖೋ-ಖೋ ಪಂದ್ಯಾವಳಿಯಲ್ಲಿ ದಾವಣಗೆರೆ ಕ್ರೀಡಾ ವಸತಿ ನಿಲಯ ತಂಡವು ರಕ್ಷಣೆ ಮತ್ತು ದಾಳಿ ಎರಡೂ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದು, ಲೀಗ್ ಹಂತದಲ್ಲಿ ಪ್ರಥಮ ಪಂದ್ಯವನ್ನು ಕೊಪ್ಪಳ ಜಿಲ್ಲಾ ತಂಡದ ವಿರುದ್ಧ, ಎರಡನೇ ಲೀಗ್ ಪಂದ್ಯವನ್ನು ಬಳ್ಳಾರಿ ತಂಡದ ವಿರುದ್ಧ ವಿಜೇತರಾಗಿ, ಸೆಮಿಫೈನಲ್ನಲ್ಲಿ ಚಳ್ಳಕೆರೆಯ ಅಶೋಕ ಕ್ರೀಡಾ ಸಂಸ್ಥೆಯ ತಂಡದ ವಿರುದ್ಧ ಗೆದ್ದು, ಅಂತಿಮ ಪಂದ್ಯದಲ್ಲಿ ಬೆಂಗಳೂರು ಪೈಯೋನಿಯರ್ಸ್ ತಂಡ ವಿರುದ್ಧ ವಿಜೇಯ ಸಾಧಿಸಿ, ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಕ್ರೀಡಾ ಪಟು ಇಲಾಖೆಯ ತರಬೇತುದಾರರಾದ ಶ್ರೀ ರಾಮಲಿಂಗಪ್ಪ. ಜೆ ಇವರ ಮಾರ್ಗದರ್ಶನದಲ್ಲಿ ಭರತ್ಕುಮಾರ್ ಪಿ.ಬಿ., ಪಂದ್ಯಾವಳಿಯ ಸರ್ವೋತ್ತಮ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದು, ವಿಜೇತ ತಂಡದ ಪರ ಬಾಹುಬಲಿ ಎಸ್.ಬಿ, ಮಹಮ್ಮದ್ ತಾಸೀನ್, ವೇಣುಗೋಪಾಲ್ಎಸ್, ಲಕ್ಷ್ಮಣ, ಶರತ್ ಜೆ.ಜಿ., ಅರ್ಜುನ, ವಿರೇಶ್, ಶರೀಫ್ಯಲಿಗಾರ್, ಸಿದ್ಧರೂಢ ಎಸ್ ಕೆ, ಗಜ ಚೌಹಣ್ ಹಾಗೂ ಗಗನ್ ಇವರುಗಳು ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಶ್ರಮಿಸಿದ್ದಾರೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
===