ಸೋಮವಾರ ನಗರದ ಶಾಮನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾದ 5 ಬೋಧನಾ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಹಾಗೂ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಸ್ಮಾರ್ಟಸಿಟಿ ಅನುದಾನದಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಅಸ್ಥಿತ್ವದಲ್ಲಿರುವ ಶಾಮನೂರು ಆಂಗ್ಲ ಮಾದ್ಯಮ ಶಾಲೆಗೆ 5 ಬೋಧನಾ ಕೊಠಡಿಗಳು, ಎಸ್.ಓ.ಜಿ ಕಾಲೋನಿಯ ಶಾಲೆ ಹಾಗೂ ಹೊಸ ಕುಂದುವಾಡ ಶಾಲೆಗೆ ತಲಾ 2 ಬೋಧನಾ ಕೊಠಡಿಗಳು.
ಕುಂದವಾಡದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕಾಂಪೌಂಡ್ ಗೋಡೆ ನಿರ್ಮಾಣ ಹಾಗೂ ಸರ್ಕಾರಿ ಫ್ರೌಢಶಾಲೆಗೆ ಬೋಧನಾ ಕೊಠಡಿಗಳ ನವೀಕರಣ, ಮತ್ತು ಅವರಗೆರೆ ಸರ್ಕಾರಿ ಹಿರಿಯ ಪಾಥಮಿಕ ಪಾಠ ಶಾಲೆಗೆ ಕಾಂಪೌಂಡ್ ಗೋಡೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹೆಚ್ಚುವರಿ ಮೂಲಸೌಕರ್ಯಗಳನ್ನು ಒದಗಿಸಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎ ರವೀಂದ್ರನಾಥ, ಸ್ಮಾರ್ಟಸಿಟಿ ವ್ಯವಸ್ಥಾಪಕರಾದ ವೀರೇಶ್ ಕುಮಾರ್, ಬಿ.ಜೆ.ಪಿ ಹಿರಿಯ ಮುಖಂಡರಾದ ಲಿಂಗರಾಜುಲ್ಮಾಜಿ ಕಾರ್ಪೊರೇಟರ್ ಶಿವಕುಮಾರ್, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನಾಗರಾಜ್, ಸ್ಮಾರ್ಟ ಸಿಟಿ ಅಭಿಯಂತರರಾದ ಕೃಷ್ಣಪ್ಪ, ಶಶಿಕುಮಾರ್ ಡಿ.ಎಲ್ ಉಪಸ್ಥಿತರಿದ್ದರು.
ಸಂಚಾರ ಜಾಗೃತಿ ಅಭಿಯಾನ