ನ್ಯಾಮತಿ: ತಾಲೂಕು ಜೀನಹಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬ ಹೊಸ ವರ್ಷದ ಅಂಗವಾಗಿ ಯುಗಾದಿ ಪಾಡ್ಯದ ದಿನದಂದು ಪ್ರತಿ ವರ್ಷದಂತೆ ಈ ವರ್ಷವೂ ಸಹ ಮೊದಲನೆಯ ಬೇಸಾಯವನ್ನ ಜ್ಯೋತಿಷ್ಯದ ಪಂಚಾಂಗದಲ್ಲಿ ಇರುವಂತೆ ತಿಥಿಗಳಿಗೆ ಅನುಗುಣವಾಗಿ ಮಕರ ರಾಶಿ ಕುಂಭ ರಾಶಿ ಸಿಂಹ ರಾಶಿ ಸೇರಿದಂತೆ ಮಕರ ರಾಶಿಯ ಹೆಸರು ಬಲದ ಅನುಗುಣವಾಗಿ ರೈತರಾದ ಕೊಟ್ಟಿಗೆ ಶಿವಪ್ಪ ಸಿದ್ದಲಿಂಗಪ್ಪ ಹೆಸರಿನವರು ಗ್ರಾಮದಲ್ಲಿ ದೇವರ ಜಮೀನಿನಲ್ಲಿ ಭೂಮಿ ತಾಯಿಗೆ ಪೂಜೆ ಮಾಡುವುದರೊಂದಿಗೆ ಮೊದಲನೇ ಬೇಸಾಯವನ್ನು ಪ್ರಾರಂಭಿಸಿದರು.
ಮೊದಲನೆಯ ಬೇಸಾಯವನ್ನ ಪೂಜೆ ಮಾಡಿ ರೈತರಾದ ಕೊಟ್ಟಿಗೆ ಶಿವಪ್ಪ ನಂತರ ಮಾತನಾಡಿ ನಮ್ಮ ಊರಿನಲ್ಲಿ ಪೂರ್ವಿಕರ ಅನಾದಿಕಾಲದಿಂದ ಯುಗಾದಿ ಹಬ್ಬದಂದು ಮೊದಲನೇ ಬೇಸಾಯವನ್ನು ಮಾಡಿಕೊಂಡು ಬರುತ್ತಿದ್ದರು. ಅದೇ ರೀತಿ ಕೂಡ ನಾವು ಸಹ ಜಾತ್ಯತೀತ, ಪಕ್ಷಾತೀತವಗಿ ಪ್ರತಿಯೊಂದು ಗ್ರಾಮಸ್ಥರು ಸೇರಿಕೊಂಡು ಸುಮಾರು 50ಕ್ಕೂ ಹೆಚ್ಚು ಎತ್ತಿನ ಜೋಡಿಗಳಿಗೆ ಜುಲಾ, ಮುಖವಾಡ, ಕೊಂಬುಗಳಿಗೆ ಬಣ್ಣದಿಂದ ಶೃಂಗರಿಸಿ ರಂಗು ರಂಗಿನ ಬಲೂನ ಕಟ್ಟಿ ಜೋಡೆತ್ತುಗಳ ಯಜಮಾನರ ಕುಟುಂಬದ ಮುತ್ತೈದೆಯರು ಮತ್ತು
ಯಜಮಾನರು ಮಕ್ಕಳು ಮೊಮ್ಮಕ್ಕಳು ಸೇರಿದಂತೆ ಮೆರವಣಿಗೆ ಮುಖಾಂತರ ಊರಿನ ಗ್ರಾಮಸ್ಥರು ದೇವರ ಜಮೀನಿನಲ್ಲಿ ಒಟ್ಟಿಗೆ ಸೇರುತ್ತಾರೆ. ಅದಾದ ನಂತರ ಯಾರು ಮೊದಲಿಗೆ ಪೂಜೆ ಮಾಡಬೇಕು ಎಂದು ಗ್ರಾಮಸ್ಥರು ಸೇರಿ ನಿರ್ಧಾರ ಮಾಡುತ್ತಾರೆ .ಆ ರೈತನು ಭೂಮಿ ತಾಯಿಗೆ ಪೂಜೆಯನ್ನು ಮಾಡಿ ಉಳಿಮೆ ಮಾಡುವ ಎತ್ತಿಗೆ ಸಹ ಪೂಜಿಸಿ ಮೊದಲನೇ ಬೇಸಾಯವನ್ನ ಪ್ರಾರಂಭ ಮಾಡುತ್ತಾರೆ. ತದನಂತರ ಗ್ರಾಮದ ಪ್ರತಿಯೊಂದು ರೈತರು ಗಂಡು ಮಕ್ಕಳು ತಲೆಗೆ ಟವಲ್ ಸುತ್ತಿಕೊಂಡು, ಹೆಣ್ಣು ಮಕ್ಕಳು ತಲೆಗೆ ಕರ್ಚಿಪ್ಪ್ ಕಟ್ಟಿಕೊಂಡು ಪ್ರತಿಯೊಬ್ಬರೂ ಅಣೆಗೆ ವಿಭೂತಿ ಧಾರಣೆ ಮಾಡಿಕೊಂಡು ಊರಿನ ದೇವರ ಜಮೀನಿನಲ್ಲಿ ಪ್ರಥಮವಾಗಿ ಬೇಸಾಯ ಮಾಡಿ, ಪುನಹ ತಮ್ಮ ತಮ್ಮ ಜಮೀನಿಗೆ ತೆರಳಿ ಭೂಮಿತಾಯಿ ಮತ್ತು ಉಳಿಮೆ ಮಾಡುವ ನೇಗಿಲು, ಎತ್ತುಗಳನ್ನು ಪೂಜೆ ಮಾಡಿ, ಈ ವರ್ಷವೂ ಮಳೆ ಬೆಳೆ ಚೆನ್ನಾಗಿ ಬಂದು ನಾವು ಭೂಮಿ ತಾಯಿಯಲ್ಲಿ ಬೀಜ ಬಿತ್ತಿದ ಬೆಳೆಯು ಸಮೃದ್ಧಿಯಾಗಿ ಬೆಳೆದು ಬಂದು ರೈತನ ಬದುಕು ಹಸನಾಗಲಿ ಎಂದು ಭೂಮಿತಾಯಿ ಮತ್ತು ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ ಎಂದು ಮೊದಲನೇ ಬೇಸಾಯ ಮಾಡಿದ ಕೊಟ್ಟಿಗೆ ಶಿವಪ್ಪ ಮತ್ತು ನಿವೃತ್ತ ಶಿಕ್ಷಕ ನಾಗೇಂದ್ರಪ್ಪ ಮಾಸ್ಟರ್ ,ರಮೇಶ್ ಪಟೇಲ್, ಕೆಂಚಪ್ಪನವರು ಆ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಜೀನಹಳ್ಳಿಯ ಗ್ರಾಮಸ್ಥರು ರೈತ ಕುಟುಂಬದವರು ಮತ್ತು ಹೆಣ್ಣು ಮಕ್ಕಳು ಸಹ ಉಪಸ್ಥಿತಿಯಲ್ಲಿದ್ದರು.