ಹೊನ್ನಾಳಿ: ಮಾ-24 ಪಟ್ಟಣದ ಮಧ್ಯಭಾಗದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಇಂದು ಲೋಕ ಶಿಲ್ಪಿ ಬೋವಿ ಸೇವಾ ಸಮಾಜ (ರಿ) ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕ್ ಘಟಕದ ಸಂಯುಕ್ತ ಆಶ್ರಯದಲ್ಲಿ ಬೋವಿ ಮಹಿಳಾ ಮತ್ತು ಪುರುಷ ಸಂಘಗಳ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕಿನ ನಿರ್ವಹಣಾಧಿಕಾರಿ ರಾಮ ಬೋವಿಯವರು ಜ್ಯೋತಿ ಬೆಳಗಿಸಿದರ ಮುಖೇನ ಚಾಲನೆ ನೀಡಿದರು.
ತಾಲೂಕ್ ನಿರ್ವಹಣಾಧಿಕಾರಿ ರಾಮಭೋವಿ ಕಾರ್ಯಕ್ರಮ ಉದ್ಘಾಟಿಸಿದ ನಂತರ ಮಾತನಾಡಿದ ಅವರು
ನಮ್ಮ ಸಮಾಜದವರು ಕಷ್ಟಪಟ್ಟು ಕಲ್ಲನ್ನು ಒಡೆದು, ಕೆರೆಕಟ್ಟೆಯನ್ನು ಕಟ್ಟಿ ಕಷ್ಟಪಟ್ಟು ಬದುಕುವ ಸ್ಥಿತಿಯಲ್ಲಿ ನಾವಿದ್ದೆವು, ಈಗ ನಾವು ನಮ್ಮ ಸಮಾಜ ಬಾಂಧವರು ಬದಲಾವಣೆ ಹಾದಿಯನ್ನು ತುಳಿಯುತ್ತಿದ್ದೇವೆ. ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನಲ್ಲಿ ಸಂಜೀವಿನಿ ಒಕ್ಕೂಟ ಸಂಘದಿಂದ ಹಿಂದುಳಿದ ವರ್ಗದ ಸಮುದಾಯದ ಭೋವಿ ಸಮಾಜದ ಮಹಿಳೆಯರು ಸಂಜೀವಿನಿ ಮಹಿಳಾ ಒಕ್ಕೂಟದ ಸಂಘದ ಅಡಿಯಲ್ಲಿ ಸಾಲವನ್ನು ಪಡೆದುಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗಲಿಕ್ಕೆ ಇಂತ ಸಂಘದಿಂದ ಮಾತ್ರ ಸಾಧ್ಯ ಎಂದು ಸಮಾಜದ ಮಹಿಳೆಯರನ್ನು ಕುರಿತು ಹೇಳುತ್ತಾ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುವಂತ ಸರ್ಕಾರಿ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ನಿಮ್ಮ ಮಕ್ಕಳಿಗೆ ಸರಿಯಾದ ರೀತಿ ಶಿಕ್ಷಣ ಕೊಟ್ಟಾಗ ಈ ಭೋವಿ ಸಮಾಜ ಮೇಲ್ಪಂಕ್ತ ಮಟ್ಟಕ್ಕೆ ಬರಲಿಕ್ಕೆ ಸಾಧ್ಯ ಎಂದು ತಾವು ನಡೆದು ಬಂದ ಕಷ್ಟ ದಿನಗಳ ಜೀವನದ ಹಾದಿ ನೆನಪಿಸಿಕೊಂಡು ನಾನೇನಾದರೂ ಹೊನ್ನಾಳಿ ತಾಲೂಕಿಗೆ ಇಇಒ ಆಗಿದ್ದೇನೆ ಎಂದರೆ ಸರ್ಕಾರದ ಸವಲತ್ತನ್ನು ಪಡೆದುಕೊಂಡು ಉನ್ನತಮಟ್ಟದ ಶಿಕ್ಷಣ ಪಡೆದು ತಾಲೂಕು ಮಟ್ಟದ ಅಧಿಕಾರಿಯಾಗಲಿಕ್ಕೆಸಾಧ್ಯ ಆಯಿತು ಎಂದು ಅಲ್ಲಿ ಸೇರಿದ್ದ ಸಮಾಜದ ಸಂಘದ ಮಹಿಳೆಯರ ಎದುರುಗಡೆ ಕಷ್ಟದ ದಿನಗಳನ್ನು ಹಂಚಿಕೊಂಡು ತಮ್ಮ ಮಕ್ಕಳು ಹೆಣ್ಣೇ ಇರಲಿ, ಗಂಡೇ ಇರಲಿ, ಅವರಿಗೆ ಉನ್ನತ ಮಟ್ಟದ ಶಿಕ್ಷಣವನ್ನು ಕೊಡಿಸಬೇಕು ಎಂದು ಮಹಿಳೆಯರಿಗೆ ಮನವಿ ಮಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಾದ ಮಾಲತೇಶ್ ಪೂಜಾರ್ ರವರು ಮಹಿಳಾ ಸಂಘಗಳ ಕುರಿತು ಮಹಿಳೆಯರ ಬಗ್ಗೆ ಇತನುಡಿಗಳನ್ನು ನುಡಿದರು.
ಪ್ರಾರ್ಥನ ಗೀತೆಯನ್ನು ಭೋವಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ನಡೆಸಿದರು.
ಪ್ರಾಸ್ತಾವಿಕ ನುಡಿಯನ್ನ ಲೋಕ ಶಿಲ್ಪಿ ಭೋವಿ ಸಮಾಜದ ಗೌರವಾಧ್ಯಕ್ಷರಾದ ದಿನೇಶ್ ನಡೆಸಿಕೊಟ್ಟರು.
ಸ್ವಾಗತ ಭಾಷಣವನ್ನು ವೀರೇಶ್ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜಪ್ಪ ಕತ್ತಿಗೆ ವಹಿಸಿದ್ದರು.
ಈ ಸಂದರ್ಭದಲ್ಲಿ ತಾಲೂಕು ಉಪವಲಯ ಅರಣ್ಯ ಅಧಿಕಾರಿ ಶ್ರೀ ಶಿವಯೋಗಿ, ಸಂಜೀವಿನಿ ಒಕ್ಕೂಟದ ವ್ಯವಸ್ಥಾಪಕರಾದ ಹಾಲೇಶ್ ನಾಯ್ಕ, ಹೊನ್ನಾಳಿ ಪೊಲೀಸ್ ಠಾಣೆಯ ಮಹಿಳಾ ಇನ್ಸ್ಪೆಕ್ಟರ್ ಶಶಿಕಲಾ. ಸಮಾಜದ ಮುಖಂಡರುಗಳು ಹಾಗೂ ಪುರುಷ ಸಂಘಗಳ ಪದಾಧಿಕಾರಿಗಳು ಮತ್ತು ಸಂಜೀವಿನಿ ಒಕ್ಕೂಟ ಸಂಘಗಳ ಮಹಿಳಾ ಸದಸ್ಯರುಗಳು ಸಹ ಭಾಗಿಯಾಗಿದ್ದರು.