ನ್ಯಾಮತಿ:ಪಟ್ಟಣದ ಕುಂಬಾರ ಬೀದಿಯ ಕುಂಬಾರ ಕುಶಲ ಕೈಗಾರಿಕಾ ಸಂಘದ ಅಡಿಯಲ್ಲಿ ‘ಸರ್ವಜ್ಞ ಭವನ ನಿರ್ಮಾಣಕ್ಕೆ’ರೂ. 41 ಲಕ್ಷಅನುದಾನ ಬಿಡುಗಡೆ ಮಾಡಲಾಗಿದೆಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಸರ್ವಜ್ಞ ಭವನ ನಿರ್ಮಾಣ ಕಾಮಗಾರಿಗೆ À ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕುಂಬಾರ ಸಮುದಾಯದವರು ಬಹಳ ವರ್ಷಗಳಿಂದ ಸರ್ವಜ್ಞ ಭವನ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದ್ದರು, ಅದರಂತೆ ಅನುದಾನ ಬಿಡುಗಡೆ ಮಾಡಲಾಗಿದೆ.ಸುಸಜ್ಜಿತವಾದ ಭವನÀ ನಿರ್ಮಾಣ ಮಾಡಿಕೊಳ್ಳಿ ಎಂದರು.
ನ್ಯಾಮತಿ ತಾಲ್ಲೂಕುಕುಂಬಾರ ಸಮುದಾಯದ ಅಧ್ಯಕ್ಷ ಹೊಸಮನೆ ಮಲ್ಲಿಕಾರ್ಜುನ, ಸಮುದಾಯದ ಪರವಾಗಿ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.
ಕುಂಬಾರ ಕುಶಲ ಕೈಗಾರಿಕಾ ಸಂಘದ ಅಧ್ಯಕ್ಷ ಮಧುರಾಜ, ಉಪಾಧ್ಯಕ್ಷ ಮಂಜುನಾಥ,ಸಂಘದ ಕಾರ್ಯದರ್ಶಿ ಕರಿಬಸಪ್ಪ ವಾಗೀಶ, ಶಿವರಾಜಪ್ಪ, ವಿಜಯಕುಮಾರ, ಮಲ್ಲಿಕಾರ್ಜುನ, ಯಶೋದಮ್ಮ, ಕವಿತಾ, ಪಂಚಪ್ಪ, ರಾಜಪ್ಪ, ಗಣೇಶಇದ್ದರು.