ನ್ಯಾಮತಿ: ತಾಲೂಕು ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆ ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಕನ್ನಡ ವಿಭಾಗದ ಆಶ್ರಯದಲ್ಲಿ ಶರಣ ಸಾಹಿತ್ಯ ದರ್ಶನ ಕಾರ್ಯಕ್ರಮ ಜರುಗಿತು.
ಶ್ರೀಮತಿ ಲಲಿತಮ್ಮ ಕತ್ತಿಗೆ ಗಂಗಾಧರಪ್ಪ ಇವರು ಸ್ಥಾಪಿಸಿದ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಚನಗಳಲ್ಲಿ ಭಕ್ತಿಯ ಅಭಿವ್ಯಕ್ತಿಯೊಂದಿಗೆ ಕಾಯಕದ ಮಹತ್ವ ಎಂಬ ವಿಷಯವಾಗಿ ಉಪನ್ಯಾಸ ಏರ್ಪಡಿಸಲಾಗಿತ್ತು
ಸತ್ಯ ಶುದ್ಧ ಕಾಯಕದೊಂದಿಗೆ ಬದುಕನ್ನು ನಡೆಸಬೇಕು. ಸರ್ವರೂ ಸಂಸ್ಕಾರ ಕಾರ್ಯ ಸಹಿತ ವಿದ್ಯೆ ಕೌಶಲ್ಯಾಧಾರಿತ ಶಿಕ್ಷಣ ಪಡೆಯುವುದು ಉತ್ತಮ. ಅನುಭವ ಮಂಟಪದಲ್ಲಿ ಪ್ರತಿನಿತ್ಯ ಕಾಯಕ ಪ್ರಸಾದ ಮತ್ತು ದಾಸೋಹದ ಭಕ್ತಿಯ ಅಭಿವ್ಯಕ್ತಿ ಮಾತ್ರ ಕಂಡುಬರುತ್ತಿತ್ತು. ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ ಎಂದು ವಚನಕಾರರು ಸಾರಿದರು. ದುಡಿಯಲಾರದವನು ತಿನ್ನಲಿಕ್ಕೆ ಅರ್ಹನಲ್ಲ ಎಂಬುದನ್ನು ಗುರುತಿಸಿದರು. ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಉಪನ್ಯಾಸ ನೀಡಿದ ತರಳಬಾಳು ಪ್ರೌಢಶಾಲೆಯ ಪ್ರಾಂಶುಪಾಲರ ಶಶಿಧರ ಗೌಡರು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ
ಡಾ// ಬಿ ಆನಂದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿವಯೋಗಿ ಎಂ ಬಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಹೆಚ್. ಸಿದ್ದಲಿಂಗಪ್ಪ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಅಂಬಿಕಾ ಸುಭಾಷ್ ಚಂದ್ರ,
ದತ್ತಿನಿಧಿ ಸ್ಥಾಪಕರಾದ ಶ್ರೀಮತಿ ದೀಪ ಶ್ರೀ ಜಗದೀಶ್ ಉಪಸ್ಥಿತರಿದ್ದರು.
ಉಪನ್ಯಾಸಕ ಜಿ.ಪಿ ರಾಘವೇಂದ್ರ ಸ್ವಾಗತಿಸಿದರು. ಶ್ರೀಮತಿ ಮಂಗಳ ಬಸವರಾಜ್ ಶರಣು ಸಮರ್ಪಿಸಿದರು, ಪ್ರಾರ್ಥನೆ ಕುಮಾರಿ ಡಿ.ಸಿ ಸುಪ್ರಿಯಾ ನಡೆಸಿಕೊಟ್ಟರು.