ದಾವಣಗೆರೆ; ಮಾ. 25 : ಜಿಲ್ಲೆಯ ಸ್ಮಾರ್ಟ ಸಿಟಿ ಲಿಮಿಟೆಡ್,  ವತಿಯಿಂದ ಮಾರ್ಚ 26 ರಂದು ಬೆಳಿಗ್ಗೆ 10.30 ಗಂಟೆಗೆ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾಮಗಾರಿಗಳ ವಿವರ  ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ದೇವರಾಜ್ ಅರಸ್ ಬಡಾವಣೆಯಲ್ಲಿ ನವೀಕರಣಗೊಳಿಸಿದ ಈಜುಕೊಳ ಹಾಗೂ ಹೊಂಡದ ಸರ್ಕಲ್ ಹತ್ತಿ ರ ಹೊಸದಾಗಿ ನಿರ್ಮಿಸಲಾದ ಕಲ್ಯಾಣಿ ಉದ್ಘಾಟಿಸುವರು.  ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ ರವೀಂದ್ರನಾಥ್ ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸಿದ ಒಳಾಂಗಣ ಕಬಡ್ಡಿ ಕೋರ್ಟ್ ಉದ್ಘಾಟಿಸಲಿದ್ದಾರೆ.
ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ(ಭೈರತಿ) ಕಾರ್ಯಕ್ರಮವನ್ನು ಉದ್ಘಾಟಿಸುವರು. ಲೋಕಸಭಾ ಸದಸ್ಯರಾದ ಡಾ.ಜಿ.ಎಂ ಸಿದ್ದೇಶ್ವರ್ ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ಸರ್ಕಾರದ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ.ವೈ.ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಶಾಸಕರಾದ ಮೋಹನ್ ಕುಮಾರ್ ಕೊಂಡಜ್ಜಿ, ಕೆ.ಪಿ.ನಂಜುಂಡಿ ವಿಶ್ವಕರ್ಮ, ರವಿಕುಮಾರ್ ಎನ್, ಡಾ.ತೇಜಸ್ವಿನಿ ಗೌಡ, ಆರ್.ಶಂಕರ್, ಚಿದಾನಂದ.ಎಂ.ಗೌಡ, ಕೆ.ಎಸ್ ನವೀನ್, ಅಬ್ದುಲ್ ಜಬ್ಬಾರ್, ಕೆ. ಹರೀಶ್ ಕುಮಾರ್, ಮಹಾಪೌರರಾದ ವಿನಾಯಕ ಪೈಲ್ವಾನ್ ಬಿ.ಹೆಚ್, ಉಪ ಮಹಾಪೌರರಾದ ಯಶೋಧಯಗ್ಗಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ರಾಕೇಶ್ ಯಶವಂತರಾವ್ ಜಾಧವ್, ಮಹಾನಗರ ಪಾಲಿಕೆ, ವಾರ್ಡ್ ನಂ.38 ಸದಸ್ಯರಾದ ಜಿ.ಎಸ್. ಮಂಜುನಾಥ್, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಎ.ವೈ ಪ್ರಕಾಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಸುಚೇತಾ ಮಹಲಿಂಗಪ್ಪ ನೆಲವಿಗಿ ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮತ್ತು  ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಅಧ್ಯಕ್ಷರಾದ ಎಸ್.ಆರ್ ಉಮಾಶಂಕರ್, ಬೆಂಗಳೂರು ಕೆ.ಯು.ಐ.ಡಿ.ಎಫ್.ಸಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸ್ಮಾರ್ಟ್ ಸಿಟಿ. ಲಿ. ನಿರ್ದೇಶಕರಾದ ಶ್ರೀಮತಿ  ದೀಪಾ ಎಂ. ಚೋಳನ್, ಬೆಂಗಳೂರು ಕ.ನ.ನೀ.ಸ ಹಾಗೂ ಒ. ಚ. ಮ ನಿರ್ದೇಶಕರು ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್ ನಿರ್ದೇಶಕರಾದ ಕೆ.ಪಿ ಮೋಹನ್ ರಾಜ್, ಬೆಂಗಳೂರು ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕರು ಹಾಗೂ ಸ್ಮಾರ್ಟ್ ಸಿಟಿ. ಲಿ. ನಿರ್ದೇಶಕರಾದ ಎನ್ ಮಂಜುಶ್ರೀ, ಜಿಲ್ಲಾಧಿಕಾರಿಗಳು ಹಾಗೂ ಸ್ಮಾರ್ಟ್ ಸಿಟಿ. ಲಿ. ನಿರ್ದೇಶಕರಾದ ಶಿವಾನಂದ್ ಕಾಪಶಿ.
ಕೇಂದ್ರ ಸರ್ಕಾರದ ಪ್ರತಿನಿಧಿ ಮತ್ತು ನಿರ್ದೇಶಕರು ರಾಜೇಶ್ ಕುಮಾರ್ ಸಾಹು, ಮಹಾನಗರ ಪಾಲಿಕೆ ಆಯುಕ್ತರು ಮತ್ತು ಸ್ಮಾರ್ಟ್ ಸಿಟಿ ನಿರ್ದೇಶಕರಾದ ಶ್ರೀಮತಿ ರೇಣುಕಾ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕರಾದ ವೀರೇಶ್ ಕುಮಾರ್, ಸ್ಮಾರ್ಟ್ ಸಿಟಿ .ಲಿ. ಸ್ವತಂತ್ರ ನಿರ್ದೇಶಕರಾದ ಎಂ ನಾಗರಾಜ್, ಶ್ರೀಮತಿ ಎಂ.ಎಸ್ ಅಲಕಾನಂದ, ಸ್ಮಾರ್ಟ್ ಸಿಟಿ ಲಿ. ನಿರ್ದೇಶಕರಾದ ಪ್ರಸನ್ನ ಕುಮಾರ್, ಆರ್ ಎಸ್ ಶಾಂತಕುಮಾರ್, ಶ್ರೀಮತಿ ಎಸ್ ಸೌಮ್ಯ, ಮಂಜುನಾಥ್ ಶಂಕರ್ ಸಿಂಗ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *